Featured, ಅಂತರಾಜ್ಯ, ಇತರೆ, ಸ್ಥಳೀಯ

ಸುಳ್ಯ : ನಾವೂರು, ಬೋರುಗುಡ್ಡೆ, ಪರಿಸರದಲ್ಲಿ ಹರ್ ಘರ್ ಜಲ್ ಯೋಜನೆಯ ಕಾಮಗಾರಿಗೆ ಚಾಲನೆ

ಹರ್ ಘರ್ ಜಲ್ ಶಾಶ್ವತ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ನಾವೂರು, ಬೋರುಗುಡ್ಡೆ ಪರಿಸರದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದರು

ಏನಿದು ! ಹರ್ ಘರ್ ಜಲ್ ಯೊಜನೆ ?

ಹರ್ ಘರ್ ಜಲ ಯೋಜನೆ
ಆಗಸ್ಟ್ 2019 ರಿಂದ, ಭಾರತ ಸರ್ಕಾರವು ಆಯಾ  ರಾಜ್ಯಗಳ ಸಹಭಾಗಿತ್ವದಲ್ಲಿ, 2024 ರ ವೇಳೆಗೆ ದೇಶದ ಪ್ರತಿಯೊಂದು ಗ್ರಾಮೀಣ ಮನೆಗಳಿಗೂ ಕುಡಿಯುವ ನೀರಿನ ಪೂರೈಕೆಯನ್ನು ಒದಗಿಸಲು ಜಲಜೀವನ್ ಮಿಷನ್ (ಜೆಜೆಎಂ) – ಹರ್‌ಘರ್‌ಜಲ್ ಅನ್ನು ಜಾರಿಗೊಳಿಸುತ್ತಿದೆ. ಈ ಮಿಷನ್ ಪ್ರಾರಂಭವಾದಾಗಿನಿಂದ 5.38 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ನೀಡಲಾಗಿದೆ. ಹೀಗಾಗಿ, 05.12.2021 ರ ಹೊತ್ತಿಗೆ, ದೇಶದ ಒಟ್ಟು 19.22 ಕೋಟಿ ಗ್ರಾಮೀಣ ಮನೆಗಳಲ್ಲಿ, ಈಗ 8.61 ಕೋಟಿ (44.84%) ಮನೆಗಳು ನಲ್ಲಿ ನೀರಿನ ಪೂರೈಕೆಯನ್ನು ಹೊಂದಿವೆ. ಏಪ್ರಿಲ್ 2020 ರಿಂದ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾದ ಮನೆಗಳ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳನ್ನು ಲಗತ್ತಿಸಲಾಗಿದೆ ಅದರಲ್ಲಿ ಗೋವಾ, ಅಂಡಮಾನ್ ನಿಕೋಬಾರ್,ಪಾಂಡಿಚೇರಿ, ಗುಜರಾತ್,ಪಂಜಾಬ್,ಹಿಮಾಚಲ್ ಪ್ರದೇಶ, ಅರುಣಾಚಲ ಪ್ರದೇಶ, ಮಿಝೋರಾಮ್ ಹರ್ ಘರ್ ಜಲ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಕರ್ನಾಟಕದಲ್ಲಿ ಶೇಕಡವಾರು  84% ಪ್ರತಿಶತ ಕಾಮಗಾರಿ ಪೂರ್ಣಗೊಳಿದೆ ಕೇರಳ ರಾಜ್ಯ ಅತ್ಯಂತ ಕಡಿಮೆ ಶೇಕಡ 54 ಪ್ರತಿಶತ ಕಾಮಗಾರಿ ಪೂರ್ಣ ಗೊಂಡಿದೆ ಆದರೆ ಭಾರತ ಸರ್ಕಾರವು 2024 ರ ವೇಳೆಗೆ ಪೂರ್ಣ ಗೊಳಿಸಲು ಉದ್ದೇಶಿತ್ತು

m

 

Related Posts