Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ತಿರುವು ರಸ್ತೆಯಲ್ಲಿ ಧರೆಗೆ ಬಿದ್ದ ತೆಂಗಿನ ಮರ

ಎರಡು ವಿದ್ಯುತ್ ಕಂಬಕ್ಕೆ ಹಾನಿ : ಜಟ್ಟಿಪಳ್ಳ ಭಾಗಕ್ಕೆ ಮುಂದುವರಿದ ವಿದ್ಯುತ್ ಕಡಿತ ! : ರಸ್ತೆ ಸಂಚಾರ ಸ್ಥಗಿತ

ಸುಳ್ಯ : ಜಟ್ಟಿಪಳ್ಳ ತಿರುವು ಜೆಪಿ ರಸ್ತೆಯಲ್ಲಿ ಅಸ್ಥಿರತೆ ಯಲ್ಲಿ ಇದ್ದ ( “ಕಲ್ಪವೃಕ್ಷ”) ತೆಂಗಿನಮರ ವೊಂದು ಧರೆಗೆ ಉರುಳಿದ ಪರಿಣಾಮ ಎರಡು ವಿದ್ಯುತ್ ಕಂಬ ಹಾನಿಯಾದ ಘಟನೆ ಇದೀಗ ಜಟ್ಟಿಪಳ್ಳ ತಿರುವು ರಸ್ತೆಯಲ್ಲಿ ಸಂಭವಿಸಿದೆ. ನಿತ್ಯ ವಾಹನ ಮತ್ತು ಜನ ಸಂಚಾರದಲ್ಲಿ ಬಿಝಿಯಾಗಿರುವ ಈ ರಸ್ತೆ ಅವಘಡ ಸಮಯದಲ್ಲಿ ವಾಹನ ಮತ್ತು ಜನ ಸಂಚಾರ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಇದೀಗ ಜಟ್ಟಿಪಳ್ಳ ರಸ್ತೆಯ‌ ಸಂಚಾರ ಸ್ಥಗಿತ ಗೊಳಿಸಿದ್ದು ಬದಲಿ ರಸ್ತೆಯ ಹಾದಿ ಹಿಡಿಯಬೇಕಿದೆ. ಜಟ್ಟಿಪಳ್ಳ ಭಾಗಕ್ಕೆ ವಿದ್ಯುತ್ ಕಡಿತ ಮುಂದುವರೆದಿದೆ

m

 

 

Related Posts