ಇತರೆ

ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಫೋಟೋ ವೈರಲ್ – ಆಕ್ರೋಶ : ಇಬ್ಬರ ಬಂಧನ

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿಗಳಾದ ಸುಜಿತ್ ಬಂಗೇರ ಹಾಗೂ ಪುಟ್ಟಣ್ಣ ಮರಿಕೆ ಎಂಬ ಇಬ್ಬರು  ಬಹಿರಂಗವಾಗಿ ತಲ್ವಾರ್ ಹಿಡಿದು “Time” ಎಂದು ತಮ್ಮ ಸ್ಟೇಟಸ್ ಗಳಲ್ಲಿ ಹಾಕಿ ಸಮಾಜದ ಶಾಂತಿ ಕದಡಲು ಯಾರನ್ನೋ ಗುರಿಯಾಗಿಸಿ ದಾಳಿ ನಡೆಸಲು  ಯಾವುದೋ ಸಮಯಕ್ಕಾಗಿ ಕಾಯುತ್ತಿದ್ದು ಊರಿನ ಜನತೆ ಭಯಭೀತರಾಗಿದ್ದಾರೆ, ಎಂಬ ಅಡಿ ಬರಹದೊಂದಿಗೆ ಪೋಟೋ ವೈರಲ್ ಆಗಿತ್ತು.
ಅಹಿತಕರ ಘಟನೆ ನಡೆಯುದಕ್ಕಿಂತ ಮುಂಚಿತವಾಗಿ ಪೋಲಿಸ್ ಇಲಾಖೆಯು ತಕ್ಷಣ ಇವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರ ಬಂಧನ

ಸಧ್ಯ ಈ ಸಂಬಂಧ ತಲ್ವಾರ್ ಹಿಡಿದುಕೊಂಡು ಪೋಸು ಕೊಟ್ಟಿದ್ದ ಪುತ್ತೂರು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32)  ಫೊಟೋ ವೈರಲ್ ಆದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

m

 

Related Posts