Featured, ಇತರೆ, ಸ್ಥಳೀಯ

ದುಬೈ : ಹೃದಯಾಘಾತದಿಂದ ಕಾಸರಗೋಡು ಮೂಲದ ಯುವತಿ ಮೃತ್ಯು

ದುಬೈ: ಕಾಸರಗೋಡು ಮೂಲದ ಯುವತಿಯೊಬ್ಬಳು, ಹೃದಯಾಘಾತದಿಂದ ದುಬೈನಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಕಾಸರಗೋಡು ಬದಿಯಡುಕ  ಮಿಯಾಪದವ್ ಮುಹಮ್ಮದ್ ಇರ್ಷಾದ್ ಅವರ ಪತ್ನಿ ದುಬಾಯಿ ಕರಾಮಾ ದಲ್ಲಿ ವಾಸವಿದ್ದ ಮುಹ್ಸಿನಾ (26) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಬದಿಯಡ್ಕ ಮುಹಮ್ಮದ್ ಕುಂಞಿ ಮತ್ತು ಮೈಮೂನಾ ಮೊಗ್ರಾಲ್ ದಂಪತಿಯ ಪುತ್ರಿ ಮುಹ್ಸಿನಾ ಮೂರು ತಿಂಗಳ ಹಿಂದೆ ದುಬೈಗೆ ಬಂದಿದ್ದರು. ಮೃತದೇಹವನ್ನು ಸ್ವದೇಶಕ್ಕೆ ತರುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಕೆಎಂಸಿಸಿ ಮೂಲಗಳು ತಿಳಿಸಿವೆ. ಮಕ್ಕಳು: ಐಸಾನ್ (4), ಇಮಾದ್ (2)

m

Related Posts