Featured, ಇತರೆ, ಸ್ಥಳೀಯ

“ರಹೀಮ್ ಹತ್ಯೆ: ಪ್ರಚೋದನೆಯೇ ಕಾರಣ: ನೈಜ ಆರೋಪಿಗಳೊಂದಿಗೆ ಘಟನೆಗೆ ಪ್ರಚೋದಿಸಿದವರನ್ನು ಪೊಲೀಸ್ ಇಲಾಖೆ ಕೂಡಲೇ ಬಂಧಿಸಲಿ – ಕೆ.ಎಸ್.ಉಮ್ಮರ್”

ದ್ವೇಷ ಬಾಷಣ ಮಾಡಿ ಹತ್ಯೆಗೆ ಪ್ರಚೋದನೆ ನೀಡುವ ಹಿಂದೂ ಸಂಘಟನೆಯ ಮುಖಂಡರ ಮೇಲೆ ದೂರು ದಾಖಲಾದರು, ಬಂದಿಸಲು ಒತ್ತಾಯ ಹೇರಿದರು, ಪೊಲೀಸ್ ಇಲಾಖೆ ನಿರ್ಲಕ್ಷ್ಯಮಾಡಿ ಮೌನ ವಹಿಸಿದರಿಂದ ಇದೀಗ  ಅಮಾಯಕ ಯುವಕನ ಹತ್ಯೆ ನಡೆದಿದೆ : ಕೆ ಎಸ್ ಉಮ್ಮರ್

ಸುಳ್ಯ :  ಬಂಟ್ವಾಳದಲ್ಲಿ ನಡೆದ ಅಮಾಯಕ ರಹೀಮ್ ಹತ್ಯೆ ಅತ್ಯಂತ ತೀವ್ರ ಖಂಡನಿಯ!, ಮಾತ್ರವಲ್ಲ ಈ ಘಟನೆಗೆ  ನೇರ ಹೊಣೆಯನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ವಹಿಸಬೇಕು. ಇದು ಪ್ರಚೋದನೆಯಿಂದ ಆದ ಹತ್ಯೆಯಾಗಿದ್ದು ನೈಜ ಆರೊಪಿಗಳೊಂದಿಗೆ ಹತ್ಯೆಗೆ ಪ್ರಚೋದಿಸಿದವರನ್ನು ಕೂಡಲೆ ಬಂದಿಸಬೇಕೆಂದು ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ ಎಸ್ ಮಾಧ್ಯಮ ಮೂಲಕ ಸರಕಾರ ಮತ್ತು ಪೊಲೀಸ್ ಇಲಾಖೆಗೆ ತೀವ್ರ ಒತ್ತಾಯ ಮಾಡಿ ಆಗ್ರಹಿಸಿದ್ದಾರೆ.
ಈ ಹಿಂದೆ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಸಾರ್ವಜನಿಕವಾಗಿ ಹಿಂದೂ ಪರ ಸಂಘಟನೆಯ ಮುಖಂಡರು ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕುತ್ತ, ಸಾರ್ವಜನಿಕ ವೇದಿಕೆಯಲ್ಲಿ ದ್ವೇಷ ಬಾಷಣ ಮಾಡಿ, ಅಮಾಯಕ ಹಿಂದೂ ಯುವಕರನ್ನು ಪ್ರಚೋದಿಸಿದ ಕಾರಣ  ಇಂದು ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ. ದ್ವೇಷ ಬಾಷಣ ಮಾಡಿ ಹತ್ಯೆಗೆ ಪ್ರಚೋದನೆ ನೀಡುವ ಹಿಂದೂ ಸಂಘಟನೆಯ ಮುಖಂಡರ ಮೇಲೆ ದೂರು ದಾಖಲಾದರು, ಬಂದಿಸಲು ಒತ್ತಾಯ ಹೇರಿದರು, ಪೊಲೀಸ್ ಇಲಾಖೆ ನಿರ್ಲಕ್ಷ್ಯಮಾಡಿ ಮೌನ ವಹಿಸಿದರಿಂದ  ಅಮಾಯಕ ಯುವಕನ ಹತ್ಯೆ ನಡೆದಿದೆ. ಇದಕ್ಕೆ ಪೊಲೀಸ್ ಇಲಾಖೆ ಮತ್ತು ಸರ್ಕಾರವೇ ನೇರ ಹೊಣೆ. ಇನ್ನಾದರೂ ಪೊಲೀಸ್ ಇಲಾಖೆ ತ್ವರಿತ ರೀತಿಯಲ್ಲಿ ನೈಜ ಆರೋಪಿಗಳೊಂದಿಗೆ ಹತ್ಯೆಗೆ ಪ್ರಚೋದಿಸಿದವರನ್ನು ಕೂಡಲೆ ಬಂದಿಸಲಿ ಎಂದು ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಒತ್ತಾಯ ಮಾಡುತ್ತದೆ. ಎಂದು ಕೆ ಎಸ್ ಉಮ್ಮರ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.

m

Related Posts