ಸ್ಕೌಟ್,ಬ್ಯಾoಡ್ ವಾದ್ಯ ಗಳೊಂದಿಗೆ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ

ಬರೆಹದ ಕೋಲುಗಳು ನಲಿವು,
ಓದಿನ ರಾಗವೇ ಜೀವನದ ಸವಿ!
ಹಿರಿಯರ ನುಡಿ – ಬೆಳಕಿನ ದಾರಿ,
ಹುಡುಕುವರಿಗೆಲ್ಲಾ ಜ್ಞಾನದ ಹರವು!
ಹೊಸ ತರಗತಿ, ಹೊಸ ಸ್ನೇಹಿತರು,
ಹೊಸ ಹಾಡು, ಹೊಸ ಕನಸು!
ಗುರುಗಳ ಮುಗ್ಧ ಮುನ್ಕೋಪವೂ
ನೆನಪಿನ ಮುದ್ದಾದ ಮೊಗ್ಗು!

ಸುಳ್ಯ : ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶೈಕ್ಷಣಿಕ ವರ್ಷದ ಸಂಭ್ರಮದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜೂನ್ 2 ರ ಸೋಮವಾರ ಜರುಗಿತು
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆ ಪ್ರವೇಶಕ್ಕೆ ಕಾತರಾಗಿದ್ದ ಮಕ್ಕಳಿಗೆ ಸುಳ್ಯ ಸೂಡ ಅಧ್ಯಕ್ಷರಾದ ಕೆ ಎಂ ಮುಸ್ತಫಾ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯರು ಕೆ ಎಸ್ ಉಮರ್, ಸಿದ್ದೀಕ್ ಕೊಕ್ಕೊ, ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ಶಾಫಿ ಕುತ್ತಮೊಟ್ಟೆ ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಇಲ್ಯಾಸ್ ಕೆ ಕಾಶಿಪಟ್ಣ ಸ್ವಾಗತಿಸಿ. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕ ಮಂಜುನಾಥ ನೆರೆವೇರಿಸಿದರು.

ಮಕ್ಕಳೊಂದಿಗೆ ಮೆರವಣಿಗೆ ಮೂಲಕ ಶಾಲೆಯತ್ತ ಹೆಜ್ಜೆಹಾಕಿದ ಆಡಳಿತ ಮಂಡಳಿ,ಶಿಕ್ಷಕರು ಹಾಗೂ ಪೋಷಕ ವೃಂದ ಅವರಿಗೆ ಹಸ್ತಲಾಘವ ನೀಡಿ, ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಖುಷಿಪಟ್ಟರು. ಮಕ್ಕಳಿಗೆ ಸಿಹಿ ತಿಂಡಿ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕ ರಂಜಿತ್ ದನ್ಯವಾದ ಸಲ್ಲಿಸಿದರು.





m

