ಸುಳ್ಯ : ಜಯನಗರ ಪೈಪ್ ಲೈನ್ ಕಾಮಗಾರಿ ಮತ್ತು ಸಾಂದರ್ಭಿಕ ವಾಗಿ ಅಲ್ಲಲ್ಲಿ ರಸ್ತೆಗಳು ತೀರ ಹದಗೆಟ್ಟಿದ್ದು ಸಾರ್ವಜನಿಕರಿಗೆ ನಡೆದಾಡಲು ಮತ್ತು ವಾಹನ ಸವಾರರಿಗೆ ಸಂಚಾರಿಸಲು ಪ್ರಯಾಸಪಡುವ ಸಂಭವ ಒದಗಿಬಂದಿದೆ ಮಾತ್ರವಲ್ಲದೆ ರಸ್ತೆಯಲ್ಲಿ ನಿರ್ಮಾಣದ ಬೃಹತ್ ಗಾತ್ರದ ಕುಳಿಗಳು ಮಳೆಯ ಸಂದರ್ಭದಲ್ಲಿ ನೀರು ತುಂಬಿ ಅದನ್ನು ಗ್ರಹಿಸಲು ಸಾಧ್ಯವಾಗದೆ ಹಲವಾರು ದ್ವಿಚಕ್ರ ವಾಹನಗಳು ಅಪಘಾತಕ್ಕೆ ಈಡಾಗಿದೆ. ಜಯನಗರ ಪ್ರದೇಶಕ್ಕೆ ಹೇಳಲು ಇಬ್ಬರು ಪಂಚಾಯತ್ ಸದಸ್ಯರು ಇದ್ದರೂ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕನಿಷ್ಠ ರಸ್ತೆಯನ್ನು ಸಹ ದುರಸ್ತಿ ಪಡಿಸಲು ಅವರಿಂದ ಸಾಧ್ಯವಾಗುತ್ತಿಲ್ಲ!? ಇದೀಗ ಮಳೆ ಆರಂಭ ವಾಗಿದ್ದು ತೀರಾ ತೀವ್ರ ಹದಗೆಟ್ಟ ಸ್ಥಿತಿಯಲ್ಲಿ ಇರುವ ರಸ್ತೆಯ ನ್ನು ದುರಸ್ತಿ ಪಡಿಸಿ ಕೊಡಿ ಎಂದು ಸುಳ್ಯ ತಹಶೀಲ್ದಾರ್ ಹಾಗೂ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ, ನಗರ ಪಂಚಾಯತ್ ಅಧ್ಯಕ್ಷರಿಗೆ ಸಾಮಾಜಿಕ ಕಾರ್ಯಕರ್ತ , ಆಮ್ ಅದ್ಮಿ ಪಕ್ಷದ ಯುವ ನಾಯಕ ದೀಕ್ಷಿತ್ ಕುಮಾರ್ ಜಯನಗರ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ, ನ್ಯಾಯವಾದಿ, ಕರ್ನಾಟಕ ಹಿತ ರಕ್ಷಣೆ ವೇದಿಕೆ ಮುಖಂಡ ಆಶೊಕ್ ಕುಮಾರ್, ರಾಮಕೃಷ್ಣ ಬಿರಮಂಗಿಲ,ಮೋಹನ ಕಲ್ಲುಗುಡ್ಡೆ,ಗಣೇಶ್ ಪಲ್ಲತಡ್ಕ,ವಿಜಯ ಕೊಂಬರಡ್ಕ,ಮನೋಜ್ ಸುಳ್ಯ ಉಪಸ್ಥಿತರಿದ್ದರು






m
