ಅರ್ಸಿಬಿ ಗೆಲುವಿನೊಂದಿಗೆ ಮುಗಿಲು ಮುಟ್ಟಿದ ಅರ್ಸಿಬಿ ಅಭಿಮಾನಿಗಳ ಸಂಭ್ರಮ

ಸುಳ್ಯ : ಜಟ್ಟಿಪಳ್ಳ
ಮಾರ್ಚ್ 22ರಂದು ಹೊಸ ತಂತ್ರಜ್ಞಾನ ದೊಂದಿಗೆ ಆರಂಭಗೊಂಡ ಐಪಿಎಲ್ನ 18ನೇ ಆವೃತ್ತಿ ಇಂದು ಪೈನಲ್ ಪಂದ್ಯದ ಹಣಾಹಣಿ ಬೆಂಗಳೂರು ಮತ್ತು ಪಂಜಾಬ್ ನಡುವೆ ನಡೆದಿದೆ. ಅದರಲ್ಲೂ ಜಟ್ಟಿಪಳ್ಳದ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಆಟದ ರೋಮಾಂಚನ ಕ್ಷಣವನ್ನು ನೋಡಲು ದೊಡ್ಡ ಪರೆದೆ ಅಳವಡಿಸಿ ಫೈನಲ್ ಪಂದ್ಯ ವೀಕ್ಷಣೆ ಮಾಡಲು ಸೌಕರ್ಯ ಕಲ್ಪಿಸಲಾಯಿತು.

ಫ್ರೆಂಡ್ಸ್ ಜಟ್ಟಿಪಳ್ಳ ವತಿಯಿಂದ ಗ್ಯಾಲರಿ ಇವೆಂಟ್ ಇದರ ಸಹಕಾರ ದೊಂದಿಗೆ ಶಿಹಾಬ್ ಷಾ,ಮೊಯ್ದೀನ್ ಸ್ಪೋರ್ಟ್ಸ್ ಮ್ಯಾಕ್ಸ್, ಅಬ್ದುಲ್ ರಜಿಮಾನ್ ಪಿ ಕೆ,ಅಬ್ದುಲ್ ರಜಾಕ್ ಕೆ ಎಂ ರವರು ಶರೀಫ್ ಜಟ್ಟಿಪಳ್ಳ ರವರ ಮನೆಯಂಗಳದಲ್ಲಿ ಬೃಹತ್ ಪರದೆಯನ್ನು ಅಳವಡಿಸಿ ಕ್ರಿಕೆಟ್ ಪಂದ್ಯಾಟ ವೀಕ್ಷಣೆ ಗೆ ಅವಕಾಶ ಕಲ್ಪಿಸಿದರು. ಮಕ್ಕಳು ಸೇರಿದಂತೆ ನೂರಾರು ಮಂದಿ ಕ್ರಿಕೆಟ್ ಪಂದ್ಯಾಟ ವೀಕ್ಷಿಸಿದರು. ಕೊನೆಯಲ್ಲಿ ಅರ್ಸಿಬಿ ಗೆಲುವಿನೊಂದಿಗೆ ಅರ್ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ





m

