Featured, ಅಂಕಣ, ಸ್ಥಳೀಯ

ಕುಂದಾಪುರ : ವಿವಾಹಿತ ಮಹಿಳೆ ನಾಪತ್ತೆ ಪ್ರಕರಣ — ಕುಂದಾಪುರ ಕೋಡಿಗೆ ಸೇತುವೆ ಬಳಿ ಸ್ಕೂಟ‌ರ್, ಚಪ್ಪಲಿ ಪತ್ತೆ ..!??.

ಕುಂದಾಪುರ : ಜೂನ್ 9 ರಂದು ಕುಂದಾಪುರ ವಿಠಲವಾಡಿ ಮೂಲದ ಮಹಿಳೆ 33 ವರ್ಷದ ಹೀನಾ ಕೌಷರ್ (33)   ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಅವರದ್ದು ಎನ್ನಲಾದ ಸ್ಕೂಟರ್, ಪಾದರಕ್ಷೆ, ಕುಂದಾಪುರ ಕೋಡಿಗೆ ಸೇತುವೆ ಬಳಿ ಪತ್ತೆಯಾಗಿದೆ, ಪೊಲೀಸರು, ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಟ ನಡೆಸಿದ್ದು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇದರಿಂದಾಗಿ ಆತ್ಮಹತ್ಯೆಯೋ ಅಥವಾ ನಾಪತ್ತೆಯೋ ಎನ್ನುವ ಅನುಮಾನ ವ್ಯಕ್ತವಾಗಿದೆ. ವಿವಾಹಿತ ಮಹಿಳೆ ಹೀನಾ ಕೌಷರ್ ರ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕುಂದಾಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

m

Related Posts