Featured, ಅಂಕಣ, ಸ್ಥಳೀಯ

ಅರಂತೋಡು ನುಸ್ರತುಲ್ ಇಸ್ಲಾಂ ಮದರಸಕ್ಕೆ ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ಯಾಗ್ ವಿತರಣೆ

ಪಟೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರಂತೋಡು ನುಸ್ರತುಲ್ ಇಸ್ಲಾಂ ಮದರಸದ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಪೈಝಿ ಗಟ್ಟಮನೆದುವಾ ನೆರವೇರಸಿ, ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು ಮುಖ್ಯಅತಿಥಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಖಿಕ ಶಿಕ್ಷಣ ವನ್ನು ಪಡೆದು ಊರಿಗೆ ಹಾಗೂ ಸಮಾಜಕ್ಕೆ ಉಪಕಾರವಾಗಬೇಕೆಂದರು ಅಧ್ಯಕ್ಷ ಅಶ್ರಫ್ ಗುಂಡಿ ಮಾತನಾಡಿ ಪ್ರತಿ ವರ್ಷ ಬ್ಯಾಗ್ ನೀಡುತ್ತಿರುವ ಪಟೇಲ್ ಚಾರಿಟೇಬಲ್ ಟ್ರಸ್ಟ್, ಓದುವ ಪುಸ್ತಕ ನೀಡುವ ಅಮೀರ್ ಕುಕ್ಕುಂಬಳ ಸಹೋದರರು, ನೋಟ್ ಪುಸ್ತಕ ವಿತರಿಸುವ ಅನ್ವರುಲ್ ಹುಧಾ ಯಂಗ್ಮೆನ್ಸ್ ಎಸೋಷಿಯೇಷನ್ ಪದಾಧಿಕಾರಿಗಳು ಮತ್ತು ಪೆನ್ ಪೆನ್ಸಿಲ್, ಕಂಪಸ್ ಕೊಡುಗೆಯಾಗಿ ನೀಡಿದ ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು, ಸದರ್ ಅಶ್ರಫ್ ಮುಸ್ಲಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವೇದಿಕೆಯಲ್ಲಿ ಪಟೇಲ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್, ಮದ್ರಸ ಮೆಯೇನೆಜ್ ಮೆಂಟ್ ಸಂಚಾಲಕಅಮೀರ್ ಕುಕುಂಬಳ, ಉಪಾಧ್ಯಕ್ಷ ಹಾಜಿ ಕೆ ಎಂ ಮೊಹಮ್ಮದ್, ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರಾದ ಶಂಸುದ್ದಿನ್ ಪೆಲ್ತಾಡಕ್ಕ, ಮುಜೀಬ್ ಅರಂತೋಡು, ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಎ ಹೆಚ್ ವೈ ಎ ಕಾರ್ಯದರ್ಶಿ ಪಸಿಲು, ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಶಂಸುದ್ದಿನ್ ಕ್ಯೂರ್, ಹನೀಫ್ ಕುನ್ನಿಲ್, ಮೊದಲದವರು ಉಪಸ್ಥಿತರಿದ್ದರು, ಅಮೀರ್ ಕುಕ್ಕುಂಬಳ ಸ್ವಾಗತಿಸಿ, ಕೆ ಎಂ ಮೂಸಾನ್ ಕಾರ್ಯಕ್ರಮ ನಿರೂಪಿಸಿದರು.

m

Related Posts