Featured, ಅಂಕಣ, ಸ್ಥಳೀಯ

ಡಾ. ಸಂದೇಶ್ ರೈ ಕುತ್ಯಾಡಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ಗೆ ಸದಸ್ಯರಾಗಿ ನಾಮನಿರ್ದೇಶನ

ಪುತ್ತೂರು:  ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಿಜಿಸ್ಟ್ರಾರ್ ಹಾಗೂ ಕೆ.ವಿ.ಜಿ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂದೇಶ್ ರೈ ಕುತ್ಯಾಡಿ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಅಕಾಡೆಮಿಕ್ ಕೌನ್ಸಿಲ್‌ಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಕುಲಪತಿಗಳು ಹೊಸದಾಗಿ ಹೊರಡಿಸಿದ ಆದೇಶದಲ್ಲಿ , ಡಾ. ಸಂದೇಶ್ ರೈ ಕುತ್ಯಾಡಿ ಇವರನ್ನು ಅಕಾಡೆಮಿಕ್ ಕೌನ್ಸಿಲ್‌ಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

ಎರಡು ಪಿಎಚ್.ಡಿ ಪದವಿಗಳನ್ನು ಹೊಂದಿರುವುದು ಅಪರೂಪವಾಗಿದ್ದು, ಡಾ. ಸಂದೇಶ್ ರೈ ಅವರು ಮೈಸೂರು ವಿಶ್ವವಿದ್ಯಾಲಯದ ಆಂತರೋಪಾಲಜಿ ಅಧ್ಯಯನ ವಿಭಾಗದಿಂದ (Department of Studies in Anthropology) 2014ರಲ್ಲಿ ಗ್ಲೋಬಲ್ ಆಂತರೋಪಾಲಜಿ ವಿಷಯದಲ್ಲಿ ಮೊದಲ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ನಂತರ 2022 ರಲ್ಲಿ, ಅವರು “ಕರ್ನಾಟಕದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಸಾಮಾಜಿಕ ಕಾರ್ಯಕರ್ತರ ಪಾತ್ರ” ಎಂಬ ವಿಷಯದ ಮೇಲೆ ಅಭಿವೃದ್ಧಿ ಅಧ್ಯಯನ ಸಂಸ್ಥೆಯ (Institute of Development Studies) ಮತ್ತೊಂದು ಪಿಎಚ್‌.ಡಿ ಪದವಿಯನ್ನು ಪಡೆದಿದ್ದಾರೆ.

ಡಾ. ಸಂದೇಶ್ ರವರು ಈವರೆಗೆ 35ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಭಾರತೀಯ ಮತ್ತು ಅಂತರರಾಷ್ಟ್ರೀಯ ಆರೋಗ್ಯ ವಿಜ್ಞಾನ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೆ, 2 ಅಂತರರಾಷ್ಟ್ರೀಯ ಮತ್ತು 3 ರಾಷ್ಟ್ರೀಯ ಜರ್ನಲ್‌ಗಳ ಸಂಪಾದಕೀಯ ಮಂಡಳಿಗಳಲ್ಲೂ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ಗೆ ನೇಮಕಗೊಂಡಿರುವುದು ಅವರ ವಿದ್ವತ್ತು ಮತ್ತು ನಿಷ್ಠಾವಂತ ಸೇವೆಗೆ ಸಾಕ್ಷಿಯಾಗಿದೆ.

m

Related Posts