ಸುಳ್ಯದ ಉದ್ಯಮಿಗಳ ಸಾಲಿನಲ್ಲಿ ಲತೀಫ್ ಹರ್ಲಡ್ಕ ವಿಶಿಷ್ಟ ಹೆಸರು. ಈ ಹೆಸರು ಸಾಮಾಜಿಕ, ಧಾರ್ಮಿಕ, ಕ್ಷೇತ್ರದ ಸೇವೆಯಲ್ಲಿ ಅಸಾಧಾರಣವಾಗಿ ಗುರುತಿಸಿಕೊಂಡಿದೆ.
ಇವರು ಯಾವುದೇ ಕಾರ್ಯಕ್ರಮ ಮಾಡಿದರು ಅದರಲ್ಲಿ ಸಮುದಾಯದ ಪರ ಕಾಳಜಿ ಎದ್ದು ಕಾಣುತ್ತದೆ, ಅರ್ಥವತ್ತಾದ ಕೊಡುಗೈ ದಾನಿಯಾದ ಇವರು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ

ಲತೀಫ್ ಹರ್ಲಡ್ಕ ಇವರ ನೇತೃತ್ವದಲ್ಲಿ ಅನ್ಸಾರಿಯಾ ಗಲ್ಸ್ ಆಡಿಟೋರಿಯಂ ನಲ್ಲಿ ನಡೆದ ಅನುಸ್ಮರಣೆ ಹಾಗೂ ದುವಾ ಮಜ್ಜಿಸ್ ಕಾರ್ಯಕ್ರಮ ಹಲವಾರು ಧರ್ಮಗುರುಗಳ ಸಾನಿಧ್ಯದಲ್ಲಿ ನೆರವೇರಿತು. ಈ ಅಧ್ಯಾತ್ಮಿಕ ಸಂಗಮವು ಕೇವಲ ಧಾರ್ಮಿಕ ವಾಗಿರದೆ ಸಾನ್ನಿಧ್ಯದ ಶಾಂತ ಸಮುದ್ರದಲ್ಲಿ ಶುದ್ಧಮನಸ್ಸಿನ ತರಂಗಗಳ ಆರಳಿಕೆಯಾಗಿತ್ತು ಸಭಾಂಗಣ ಉದ್ದಕ್ಕೂ ಉಲಮಾ, ಉಮಾರ, ಜನ ಸಂಖ್ಯೆ ತುಂಬಿ ತುಳುಕುತ್ತಿತ್ತು, ಇದು ಅಕ್ಷರಶಃ ನಂಬಿಕೆಗಳ ಬಂಧ, ಭಾವನೆಗಳ ಮಿಲನ,ಧ್ಯಾನಧಾರೆ ಹರಿದು ಹೃದಯ ತೇವಗೊಂಡ ಕ್ಷಣಗಳು ಸೃಷ್ಟಿಯಾಗಿತ್ತು. ಈ ಬೃಹತ್ ಅಧ್ಯಾತ್ಮದ ಸಂಗಮ..

ತನ್ನ ಚಿಕ್ಕ ವಯಸ್ಸಿನಲ್ಲೇ ಮೃತ್ಯು ಹೊಂದಿದ ತಾಯಿ, ಅಪಘಾತದಲ್ಲಿ ಮೃತ್ಯು ಹೊಂದಿದ ಮಾವ, ಯುವ ಲೇಖಕ, ಕವಿ, ಅಬ್ಬುಲ್ಲಾ ಹರ್ಲಡ್ಕ ಇವರುಗಳ ಪುಣ್ಯ ಸ್ಮರಣೆ ಹಾಗೂ, ಅಗಲಿದ ಉಮರಾ,ಉಲಮಾ,ಸಾದತ್ ಗಳ ಅನುಸ್ಮರಣೆ ಅಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಜೂನ್ 26 ರಂದು ಸುಳ್ಯದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಯಶಸ್ವಿಯಾಗಿ ಜರುಗಿತು

ಪೂರ್ವಜರ ಮಾರ್ಗದರ್ಶನವನ್ನು ಅನುಸರಿಸಿ : ಸಯ್ಯದ್ ಖಲೀಲ್ ತಂಙಳ್
ಅನುಸ್ಮರಣೆ ಕಾರ್ಯಕ್ರಮವನ್ನು ಅಖಿಲ ಭಾರತ ಜಂಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಂ ಖಲೀಲ್ ತಂಜಳ್ ದುವಾಶಿರ್ವಚನ ಮೂಲಕ ದುವಾ ಮಜ್ಜಿಸ್ ನೇತ್ರತ್ವ ವಹಿಸಿ ಈಗೀನ ಕಾಲದ ಜೀವನ ಶೈಲಿ ಬದಲಾಗಿದೆ ಆದರಿಂದ ಸಮಾಜದಲ್ಲಿ ಆತಂಕಗಳೂ ಹೆಚ್ಚುತ್ತಿದೆ ಯಾರು ಕೂಡ ನಮ್ಮ ಪೂರ್ವಜರ ಮಾರ್ಗದರ್ಶನವನ್ನು ಅನುಸರಿಸುತ್ತಿಲ್ಲ ಅದುವೇ ದೊಡ್ಡ ದುರಂತ ಎಂದವರು ಮಾತನಾಡಿದರು.

ಅಸಹಾಯಕ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ : ಡಾ.ಅಬ್ದುಲ್ ಹಕೀಂ ಅಝಹರಿ
ಮರ್ಕಜ್ ನ್ಯಾಲೇಜ್ ಸಿಟಿ ಆಡಳಿತ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅಝಹರಿಮಾತನಾಡಿ ನಮ್ಮ ಸಮಾಜದಲ್ಲಿ ಎಲ್ಲಿ ಬಡವರ ಇದ್ದಾರೆ,ಎಲ್ಲಿ ವಿಶೇಷ ಚೇತನ ರಿದ್ದಾರೆ, ಎಲ್ಲಿ ಅನಾಥರಿದ್ದಾರೆ ಅಂತವರನ್ನು ಹುಡುಕಿ ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿ ತರುವಂತ ಕೆಲಸಮಾಡಿದರೆ ಮಾತ್ರ ದೇವರ ಕೃಪೆ ಭೂಮಿ ಇರುತ್ತದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿದ ಸೈಯದ್ ಕುಟುಂಬ ಮತ್ತು ಉಲಮಾ ಪಂಡಿತರು
ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ,ಸಯ್ಯಿದ್ ಮುತ್ತನ್ನೂರು ತಂಙಳ್, ಸಯ್ಯಿದ್ ಅಶ್ರಫ್ ತಂಙಳ್ ಆದೂರು, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ,ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ ಜಮಲುಲ್ಲೈಲಿ ತಂಙಳ್ ಕಾಜೂರು,ಸಯ್ಯಿದ್ ಕುಂಞಿ ಕೋಯ ತಂಙಳ್ , ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಲ್,ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್, ಸಯ್ಯಿದ್ ಮುತ್ತುಕೋಯ ತಂಙಳ್ ಕಣ್ಣವಂ,
ಸಯ್ಯಿದ್ ಇಂಬಿಚ್ಚಿಕೋಯ ತಂಙಳ್ ಗಾಳಿಮುಗ, ಸಯ್ಯಿದ್ ಮರ್ದಾಳ ತಂಙಳ್, ಸಯ್ಯಿದ್ ಮುಹ್ಸಿನ್ ತಂಙಳ್ ಎಲಿಮಲೆ, ಸಯ್ಯಿದ್ ಉಮರ್ ಜಿಫ್ರಿ ತಂಙಳ್ ಕುಂಭಕ್ಕೋಡ್,ಸಯ್ಯಿದ್ ಫಝಲ್ ಸೀದೀ ಅಲ್ ಹೈದ್ರೂಸ್,ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ದುಗ್ಗಲಡ್ಕ,ಸಯ್ಯಿದ್ ತ್ವಾಹಿರ್ ತಂಙಳ್ ಸಅದಿ, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ , ಸಯ್ಯಿದ್ ಪೂಕೋಯ ತಂಙಳ್,ಸಯ್ಯಿದ್ ಮಿಹ್ರಾಜ್ ತಂಙಳ್ ,ಸಯ್ಯಿದ್ ತಾಜುದ್ದೀನ್ ತಂಙಳ್,ಸಯ್ಯಿದ್ ಸ್ವಲಾಹುದ್ದೀನ್ ತಂಙಳ್ ಸುಳ್ಯ,ಝೈನುಲ್ ಉಲಮಾ ಮಾಣಿ ಉಸ್ತಾದ್, ಪೇರೋಡು ಅಬ್ದುರ್ರಹ್ಮಾನ್ ಸಖಾಫಿ,ಡಾ: ಅಬ್ದುಲ್ ಹಕೀಂ ಅಝ್ಅರಿ, ಕಾವಲಕಟ್ಟೆ ಹಝ್ರತ್,ಕಲ್ತರ ಅಬ್ದುಲ್ ಖಾದರ್ ಮದನಿ,ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ,ಮಹ್ಮೂದುಲ್ ಫೈಝಿ ವಾಲಮುಂಡೋವು,ನೌಫಲ್ ಸಖಾಫಿ ಕಳಸ,ಇಬ್ರಾಹೀಂ ಸಖಾಫಿ ತಾತೂರು,ಮದನೀಯಂ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ,ರಫೀಕ್ ಸಅದಿ ದೇಲಂಪಾಡಿ,ಅಬೂ ಸ್ವಾಲಿಹ್ ಸಖಾಫಿ ಪೂನೂರು,ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಅಬ್ದುಲ್ ಖಾದರ್ ಸಖಾಫಿ ಮುದುಗುಡ,ಯೂನುಸ್ ಸಖಾಫಿ ವಯನಾಡು,ತೌಸೀಫ್ ಸಅದಿ ಹರೇಕಳ,
ಇಬ್ರಾಹೀಂ ಮದನಿ ಬೀಟಿಗೆ,ಅಶ್ರಫ್ ಸಖಾಫಿ ಮಾಡಾವು,ಯೂಸುಫ್ ಸಖಾಫಿ ಬನಾರಿ,ಝಿಯಾದ್ ಸಖಾಫಿ ನೆಕ್ಕಿಲ್, ರಫೀಖ್ ಸಅದಿ ಅಳಕೆಮಜಲು,ಅಬೂಬಕರ್ ಸಖಾಫಿ ಅಲ್ ಫುರ್ಖಾನಿ ಎಣ್ಮೂರು,ಇಬ್ರಾಹೀಂ ಸಖಾಫಿ ಪುಂಡೂರು,ಉಮರ್ ಮುಸ್ಲಿಯಾರ್ ಮರ್ದಾಳ, ಇಬ್ರಾಹೀಂ ಸಖಾಫಿ ಕಬಕ, ಅಬ್ದುಲ್ ಹಮೀದ್ ಸಅದಿ ಕಳಂಜಿಬೈಲ್, ಅಬ್ದುಲ್ಲಾ ಅಹ್ಸನಿ ಮಾಡನ್ನೂರು,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಉಪಸಂಹಾರ…..
ಕಾರ್ಯಕ್ರಮದ ಕೊನೆಯಲ್ಲಿ ಹರ್ಲಡ್ಕ ಕುಟುಂಬದ ಇಬ್ಬರೂ ನೂತನ ವಧು, ವರ,ರಿಗೆ ನಿಖಾ: ಸಂಭ್ರಮದ ಜೊತೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಯಿತು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಮತ್ತು ಸರ್ವರನ್ನು ಲತೀಫ್ ಹರ್ಲಡ್ಕ, ಇರ್ಷಾದ್ ಹರ್ಲಡ್ಕ, ಹಾಗೂ ಹರ್ಲಡ್ಕ ಕುಟುಂಬಸ್ಥರು ಸ್ವಾಗತಿಸಿದರು





m

