ಜುಲೈ 04, ಸುಳ್ಯ – ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ನ್ಯಾಯವಾದಿ, ಸುಳ್ಯದ ಪ್ರಪ್ರಥಮ ನೋಟರಿ, ಜಿಲ್ಲಾ ಪರಿಷತ್‌ನ ಮಾಜಿ ಸದಸ್ಯರು, ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸುಳ್ಯ ತಾಲೂಕು ಬೋರ್ಡ್‌ನ ಮಾಜಿ ಅಧ್ಯಕ್ಷರಾದ ಐವತ್ತೊಕ್ಲು ಕುಂಞಪ್ಪಳ್ಳಿ ವಕೀಲರ ಸ್ಮರಣಾರ್ಥವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ಜುಲೈ 04 ರಂದು ಜರಗಿತು. ಕಾರ್ಯಕ್ರಮವನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ ವಹಿಸಿದರು.

ಕುಂಞಪ್ಪಳ್ಳಿ ವಕೀಲರು – ಸಾಮರಸ್ಯ, ಸೌಹಾರ್ದತೆಗೆಮೇಲ್ಪoಕ್ತಿ ಹಾಕಿದ ವ್ಯಕ್ತಿ : ಗಿರೀಶ್ ಭಾರದ್ವಾಜ್
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ವಕೀಲರು ತನ್ನ ಪೂರ್ಣ ಆಯುಷ್ಯ ವನ್ನು ಸಮಾಜದಲ್ಲಿ ಅಪೂರ್ವ ವೆನಿಸಿದ ರೀತಿಯಲ್ಲಿ ಬದುಕಿ ದಶಕಗಳ ಹಿಂದೆ ಸುಳ್ಯದಲ್ಲಿ ಸಾಮರಸ್ಯ, ಸೌಹಾರ್ದತೆಯ ಮೇಲ್ಪoಕ್ತಿ ಹಾಕಿದ ಕುoಞಪಳ್ಳಿ ಯವರ ಯಶಸ್ವಿ ಜೀವನ ಇತರರಿಗೆ ಮಾದರಿ ಎಂದರು, ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ ಮಾತಾನಾಡಿ ಅವರು ಕೇವಲ ವೃತ್ತಿಪರ ವಕೀಲರಷ್ಟೇ ಅಲ್ಲ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಜನಮನ ಗೆದ್ದ ಮಹಾನ್ ವ್ಯಕ್ತಿತ್ವವಾಗಿದ್ದರು ಎಂದರು

ಐವತ್ತೊಕ್ಲು ಕುಂಞಪ್ಪಳ್ಳಿ – ಶ್ರೇಷ್ಠ ಮಾನವತಾವಾದಿಯ ಒಂದು ಜೀವಂತ ಸ್ಮರಣೆ : ಭರತ್ ಮುಂಡೋಡಿ
ದ ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅದ್ಯಕ್ಷ ರಾದ ಭರತ್ ಮುಂಡೋಡಿ ಇವರು ಮಾತಾನಾಡಿ ಐವತ್ತೊಕು ಕುಂಞಪ್ಪಳ್ಳಿ – ಈ ಹೆಸರೇ ಸಾಕು, ಒಂದು ಮೌಲ್ಯಾಧಾರಿತ ಬದುಕಿನ ಪ್ರತೀಕಕ್ಕೆ. ಅವರು ಬದುಕಿದ್ದು ಸರಳವಾಗಿ, ಆದರೆ ಸ್ಪಷ್ಟ ಮೌಲ್ಯಗಳೊಂದಿಗೆ. ಅವರ ನಡೆ, ನುಡಿ, ಸೇವೆ – ಎಲ್ಲವೂ ಮಾನವೀಯತೆಯ ಸ್ಪಂದನೆಗೆ ಸಾಕ್ಷಿಯಾದವು. ಅವರು ಶ್ರೇಷ್ಠ ಮಾನವತಾವಾದಿಯ ಒಂದು ಜೀವಂತ ಸ್ಮರಣೆ ಎಂದರು
ಕಾಂಗ್ರೆಸ್ ಪಕ್ಷದ ಮುಖಂಡರು ವಕೀಲರು ಆದ ವೆಂಕಪ್ಪ ಗೌಡ ಮಾತನಾಡುತ್ತ ಕುಟುಂಬದ ಬೇರುಗಳನ್ನೂ ಶಕ್ತಿಯಾಗಿ ಹಿಡಿದುಕೊಂಡು, ಶುದ್ಧ ಸಂಸ್ಕೃತಿಯ ಬೆಳಕನ್ನು ಮುಂದಿನ ಪೀಳಿಗೆಗೆ ಹಂಚಿದ ಅವರ ಜೀವನ, ನಿಸ್ವಾರ್ಥ ಸೇವೆಗೆ ನಿದರ್ಶನ.ಐವತ್ತೊಕು ಕುಂಞಪ್ಪಳ್ಳಿ ಅವರು ಧರ್ಮ, ಜಾತಿ,ಪಕ್ಷೀಯತೆಯನ್ನು ಮೀರಿ, ಎಲ್ಲರಿಗೂ ಸಹಕಾರಿಯಾಗುತ್ತಿದ್ದರು ಎಂದರು

ಕಾರ್ಯಕ್ರಮದಲ್ಲಿ ಎಂ. ಬಿ. ಸದಾಶಿವ, ಜಯಪ್ರಕಾಶ್ ರೈ, ನಿತ್ಯಾನಂದ ಮುಂಡೋಡಿ, ಸುಳ್ಯ ತಾಲೂಕು ಸಂಯುಕ್ತ ಜಮಾಹತ್ ಅಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ, ಕೆ ಪಿ ಜಾನಿ, ಇಬ್ರಾಹಿಂ ಗೂನಡ್ಕ,ಗೋಕುಲ್ ದಾಸ್,ಸುಧಾಕರ ರೈ, ರಾಮಚಂದ್ರ ಪೆಲ್ತಡ್ಕ,ರಾಧಾಕೃಷ್ಣ ಬೊಳ್ಳುರು, ಲಯನ್ಸ್ ಮಾಜಿ ಜಿಲ್ಲಾ , ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ, ಎಸ್. ಗಂಗಾಧರ್,ಸುಳ್ಯ ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಆರ್. ಗಂಗಾಧರ್ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ, ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆ ಪರಿಷತ್ ರಾಜ್ಯ ಸಮಿತಿ ಸದಸ್ಯ ಕೆ. ಪಿ. ಜಾನಿ, ಶ್ರೀ ಶಾರದಾoಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಮುಂತಾದವರು ನುಡಿ-ನಮನ ಸಲ್ಲಿಸಿದರು

ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಎಸ್. ಸಂಶುದ್ದೀನ್, ಹಮೀದ್ ಕುತ್ತಮೊಟ್ಟೆ, ಚಂದ್ರಶೇಖರ ಪೆರಾಲ್, ದಾಮೋದರ ಗೌಡ ಪ್ರಿನ್ಸಿಪಾಲ್, ಕೆ ಎಸ್ ಉಮ್ಮರ್, ಇಕ್ಬಾಲ್ ಎಲಿಮಲೆ,ಸಿದ್ದೀಕ್ ಕ್ಕೂಕ್ಕೂ ಆಶ್ರಫ್ ಗುಂಡಿ,ಭವಾನಿ ಶಂಕರ ನಂದ ರಾಜ್ ಸಂಕೇಶ್ ಅಬ್ಬೂಬಕ್ಕರ್ ಅಡ್ಕಾರ್, ಮೂಸಾ ಪೈಂಬಚ್ಚಾಲ್, ಎಸ್ ಎ ರಹಮಾನ್ ಬೊರುಗುಡ್ಡೆ, ಮೊಹಿದ್ದೀನ್ ಫ್ಯಾನ್ಸಿ, ಡಾ|ರಂಗಯ್ಯ, ಹಮೀದ್ ಬೀಜ ಕೊಚ್ಚಿ, ಮೊದಲಾದವರು ಉಪಸ್ಥಿತರಿದ್ದರು ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್ ವಂದಿಸಿದರು
ಪ್ರಾರಂಭದಲ್ಲಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ಹಿಫ್ ಳುಲ್ ಖುರ್ ಆನ್ ಕಾಲೇಜು ಪ್ರಾoಶುಪಾಲ ರಾದ ಹಾಫಿಳ್ ಹಾಮಿದ್ ಹಿಮಮಿ ಸಖಾಫಿ ಮೃತರ ಮಗಫಿರತ್ ಗಾಗಿ ಪ್ರಾರ್ಥನೆ ನೆರವೇರಿಸಿದರು





m

