Featured, ಅಂಕಣ, ಸ್ಥಳೀಯ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಬೆಂಗಳೂರಿನಲ್ಲಿ ಉಚಿತ ತರಬೇತಿ ಕಾರ್ಯಗಾರ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಬೆಂಗಳೂರಿನ ಲೋವೆಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಹಣಕಾಸು ವಿಭಾಗದ ಹಿರಿಯ ನಿರ್ದೇಶಕರಾದ ಶ್ರೀ ಸುಬ್ಬರಾಮು ಟಿ ವಿ ರವರು “ಹಣಕಾಸಿನೇತರ ಉದ್ದೇಶಗಳಿಗಾಗಿ ಹಣಕಾಸು”ಎಂಬ ವಿಷಯದ ಬಗ್ಗೆ ಮತ್ತು ಕ್ರೆಸೆಂಟ್ ಕನ್ಸಲ್ಟೆಂಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಇಸ್ಮಾಯಿಲ್ ಜರ ರವರು “ಮನೋವೃತ್ತಿ (Positive Attitude)” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.

ಈ ಕಾರ್ಯಗಾರವು ಜುಲೈ. 05 ರಂದು ಬೆಂಗಳೂರಿನ ವೈಟ್ ಫೀಲ್ಡ್ ಕೈಗಾರಿಕಾ ವಲಯದಲ್ಲಿ ಜರಗಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಧ್ಯಕ್ಷರು – ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಹಾಗೂ ಫಾರ್ಮೆಡ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ, ತರಬೇತಿ ಹಾಗೂ ಆಡಳಿತ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಯವರು ಅಧ್ಯಕ್ಷತೆಯನ್ನು ವಹಿಸಿ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಇಸಾಕ್ ಯಕುಬ್ ಮತ್ತು ರವಿಕುಮಾರ್ ರವರು ಶ್ರೀ ಸುಬ್ಬರಾಮು ರವರನ್ನು ಗೌರವಿಸಿದರು. ದುಬೈ ಮತ್ತು ಸೌದಿ ಅರೇಬಿಯಾ ಪ್ರವಾಸವನ್ನು ಕೈಗೊಂಡಿರುವ ಶ್ರೀ ಇಸ್ಮಾಯಿಲ್ ಜರ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮವನ್ನು ಮಂಜುನಾಥ ಆರ್ ಹಿರಿಯೂರು ಮತ್ತು ರಕ್ಷಿತ್ ರವರು ಸಂಯೋಜಿಸಿದರು. ಇಸ್ಮಾಯಿಲ್ ಜರ ರವರು ಸ್ವಾಗತಿಸಿ, ರವಿಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾದ ಕೃಷ್ಣಮೂರ್ತಿ, ಅರವಿಂದ್, ಚೆಲುವರಾಜು, ಹರೀಶ್, ಮತ್ತಿತರರು ಪಾಲ್ಗೊಂಡಿದ್ದರು.

m

Related Posts