ಸುಮಾರು140 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸುಳ್ಯದ ಪ್ರತಿಷ್ಠಿತ ಮುಹಮ್ಮದ್ ಉಗ್ರಾಣಿ ಮನೆತನದ ಕುಟುಂಬ ಸಮ್ಮಿಲನವು “ಕುಟುಂಬದೊಂದಿಗೆ ಒಂದುದಿನ“ಎಂಬ ಘೋಷವಾಕ್ಯ ದೊಂದಿಗೆ ಈ ಕಾರ್ಯಕ್ರಮವು…. ಕಳೆದ ಏಪ್ರಿಲ್ 27 ರಂದು ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಿತು.
ಮುಹಮ್ಮದ್ ಅಷಾದ್ ಅಝೀಜ್ ಕಿರಾ ಅತ್ ಪಟಿಸುವುದರೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು
ನಮ್ಮಿಂದ ಅಗಲಿದ ಕುಟುಂಬಸದಸ್ಯರ ಪಾರತ್ರಿಕ ವಿಜಯಕ್ಕಾಗಿ ಯಾಸಿನ್ ಪಠಿಸಿ ದುವಾ ಮಾಡುವುದರ ಮೂಲಕಹಾಜಿ ಅಬ್ದುಲ್ ಖಾದರ್ ಅಜಾದ್ ರವರು ವಿದ್ಯುಕ್ತ ಚಾಲನೆ ನೀಡಿದರು. ಹಾಜಿ ಅಬ್ದುಲ್ ಹಮೀದ್ ಜನತಾ ಕುಟುಂಬ ಸದಸ್ಯರನ್ನೆಲ್ಲಾ ಸ್ವಾಗತಸಿ ಆತ್ಮೀಯವಾಗಿ ಬರಮಾಡಿಕೊಂಡರು ಪ್ರಾಸ್ತಾವಿಕವಾಗಿ ಮಾತನಾಡಿದ
ಡಾ: ಉಮ್ಮರ್ ಬೀಜದಕಟ್ಟೆಯವರು ಕುಟುಂಬ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕುಟುಂಬ ಸಮ್ಮಿಲನವನ್ನು ಆಯೋಜಿಸಲಾಗಿದೆ ಎಂದರು.
ವೇದಿಕೆಯಲ್ಲಿ ಆಸೀನರಾಗಿದ್ದ ಉಗ್ರಾಣಿ ಕುಟುಂಬದ ಎರಡನೇ ಮತ್ತು ಮೂರನೇ ತಲೆ ಮಾರುಗಳ ಸದಸ್ಯರನ್ನು ಪರಿಚಯಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು
ನೋಂದಣಿ ವಿಭಾಗದ ಮುಖ್ಯಸ್ಥರಾಗಿ ರಿಪಾಯಿ ಜನತಾ ಕಾರ್ಯನಿರ್ವಹಿಸಿದರು
ನಂತರ ಕುಟುಂಬದ ಸದಸ್ಯರಾದ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪ್ರತ್ಯೇಕ ಗುಂಪುಗಳಾಗಿ ವರ್ಗೀಕರಿಸಿ ವಿವಿಧ ರೀತಿಯ ಸ್ಪರ್ಧೆಗಳನ್ನು ಮುನಫರ್ ರವರ ನೇತೃತ್ವದಲ್ಲಿ ಆಯೋಜಿಸಲಾಯಿತು ಹಂತ, ಹಂತವಾಗಿ ನಡೆದ ಸಭಾ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಕೂಡ ನಡೆಯಿತು.
ಕಾರ್ಯಕ್ರಮಕ್ಕೆ ಮುಂಚಿತವಾಗಿ ಆನ್ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು .
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಸದಸ್ಯರ ಸಾಧನೆಗಳನ್ನು ಗುರುತಿಸುವಿಕೆ, ಕಾರ್ಯಕ್ರಮವೂ ನಡೆಯಿತು ಇದೇ ಸಂದರ್ಭದಲ್ಲಿ ಮು ಹಮ್ಮದ್ ಉಗ್ರಾಣಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟನ್ನು ರಚಿಸುವರೇ ಘೋಷಣೆ ಮಾಡಲಾಯಿತು
ಅಭೂತಪೂರ್ವವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಉಗ್ರಾಣಿ ಕುಟುಂಬದ ಸುಮಾರು 750 ಕ್ಕೂ ಮಿಕ್ಕಿ ಕುಟುಂಬ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು
ಕುಟುಂಬ ಸದಸ್ಯರಿಗೆ ವಿಶೇಷ ಸ್ಪರ್ಧಾಕೂಟಗಳು, ಊಟಿ ಮತ್ತು ಮೈಸೂರು ಪ್ರವಾಸ ಭಾಗ್ಯಗಳು, ಹಾಗೂ ಗಂಟೆಗೊಂದು ಬಹುಮಾನ ಯೋಜನೆಯು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತು
ಸ್ವಚ್ಛತಾ ವಿಭಾಗದ ಮುಖ್ಯಸ್ಥರಾಗಿ ಮುಸ್ತಫ ಭದ್ರ ಕಾರ್ಯನಿರ್ವಹಿಸಿದರು, ಪಾರ್ಕಿಂಗ್ ಮತ್ತು ಭದ್ರತಾ ಉಸ್ತುವಾರಿಯನ್ನು ಅಬ್ದುಲ್ ಗಫರ್ ನಿರ್ವಹಿಸಿದರು ಸಾಧಕರ ಪಟ್ಟಿಯನ್ನು ಸಫ್ವಾನ್ ಜನತಾ ಸಭೆಯಲ್ಲಿ ವಾಚಿಸಿದರು
ವೇದಿಕೆ, ಸಭಾಂಗಣ, ಅಲಂಕಾರ ಮುಂತಾದವುಗಳ ನೇತೃತ್ವವನ್ನು ರಹೀಮ್ ಬೀಜದ ಕಟ್ಟೆ ಮತ್ತು ಫೈಝಲ್ ಬೀಜದ ಕಟ್ಟೆ ಅಚ್ಚುಕಟ್ಟಾಗಿ ನಿರ್ವಹಿಸಿದರು
ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆಯನ್ನು ಮಜೀದ್ ಕೆಬಿ ಮತ್ತು ಅಬ್ದುಲ್ ಕಲಾಂ ರವರು ನಿರ್ವಹಿಸಿದರು. ಊಟೋಪಚಾರದ ವ್ಯವಸ್ಥಾಪಕರಾಗಿ ನಜೀರ್ ಸುಪ್ರೀಂ,ರಫೀಕ್ ಚಾಯ್ಸ್ ಮತ್ತು ಜನತಾ ಆಗ್ರೋ ರಹೀಂ ರವರು ನಿರ್ವಹಿಸಿದರು, ಬಹುಮಾನ ಸಂಗ್ರಹಕರಾಗಿ ಕಯ್ಯುಮ್ ರವರು ಕಾರ್ಯನಿರ್ವಹಿಸಿದ ರು,ಚಯರ್ಮೆನ್ ಹಾಜಿ ಅಬ್ದುಲ್ ಮಜೀದ್ ಹಾಗೂ ಹಾಜಿ ರಿಜ್ವಾನ್ ಜನತಾ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಹಿಳಾ ವಿಭಾಗದ ಮುಖ್ಯ ಸಂಯೋಜಕರಾಗಿ ಶ್ರೀಮತಿ ಝರೀನಾ ಮಜೀದ್, ಶ್ರೀಮತಿ ಅಬ್ಸತ್ ಅಝೀಜ್ , ಶ್ರೀಮತಿ ನಝೀರಾ ಹನೀಫ್ ಮತ್ತು ಶ್ರೀಮತಿ ಜಮೀಲ ರಹೀಂ ಬೀಜದಕಟ್ಟೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿ ನಿರೂಪಿಸಿದರು.





m
