ನಾಳೆಯ ಸಭೆ ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಎಂಬುದು ಇದೀಗ ಸುಳ್ಯ ರಾಜಕೀಯ ವಲಯದ ಹಾಟ್ ಟಾಪಿಕ್..!!
ಸುಳ್ಯ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ವಹಿಸಲಾಗುತ್ತದೆ ಎಂಬ ಕುತೂಹಲ ಸದ್ಯ ಕಾಂಗ್ರೆಸ್ ವಲಯದಲ್ಲಿ ಚರ್ಚೆ ತೀವ್ರವಾಗಿದೆ. ಕೆಲವರು “ಪಾಳಯದಲ್ಲಿ ಹೊಸ ಮುಖ ಬಂದರೆ ಬದಲಾವಣೆ ಸಾಧ್ಯ” ಎನ್ನುತ್ತಿದರೆ, ಇತರರು “ಅನುಭವವೇ ಅತ್ಯುತ್ತಮ ಮಾರ್ಗದರ್ಶಿ” ಎಂದು ಹಿರಿಯ ನಾಯಕರ ಪರ ವಾದಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ಸುಳ್ಯ ಬ್ಲಾಕ್ ಅಧ್ಯಕ್ಷ ಗಾದಿಗೆ ಪಕ್ಷದೊಳಗಿನ ಪೈಪೋಟಿಗೆ ಅಖಾಡ ಸಿದ್ಧವಾಗಿದೆ. ನಾಳೆ ಸುಳ್ಯಕ್ಕೆ ವೀಕ್ಷಕರ ತಂಡ ಆಗಮಿಸಲಿದ್ದು ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕು ಜನ ಅಧ್ಯಕ್ಷಗಾದಿಗೆ ಆಕಾಂಕ್ಷಿ ಯಾಗಿದ್ದು ನಾಳೆ ಅಂತಿಮ ತೀರ್ಮಾನ ವಾಗಲಿದೆ. ಯಾರು ಆದರೂ ಆಯ್ಕೆಯಾಗುವ ಹೊಸ ಸಾರಥಿಗೆ ಸವಾಲುಗಳ ಮಹಾಪೂರವೇ ಹೊರ ಬೇಕಾಗಿದೆ.
ಬಿಜೆಪಿ ವರ್ಚಸ್ಸು ಮುಂದೇ ಕಾಂಗ್ರೆಸ್ ಸಾಧನೆ.!??
ಹೇಳಿ ಕೇಳಿ.. ಸುಳ್ಯದ ರಾಜಕೀಯ ಗಮನಿಸಿದರೆ ಬಿಜೆಪಿ ಯ ವರ್ಚಸ್ಸು ಮುಂದೆ ಕಾಂಗ್ರೆಸ್ ಮಕಾಡೇ ಮಲಗಿದೆ. ಎನ್ನಬಹುದು.? ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಸಹಕಾರಿ ಸಂಘ, ಹಾಲು ಸೊಸೈಟಿ, ವಿದ್ಯಾರ್ಥಿ ಸಂಘಟನೆಯ ಚುನಾವಣೆಯಲ್ಲಿ ಎಲ್ಲದಲ್ಲೂ ಬಿಜೆಪಿ ಮುಂದೆ ಕಾಂಗ್ರೆಸ್ ಸಾಧನೆ ಪಾತಾಳಕ್ಕೆ ಇಳಿದಿದೆ. ಕಷ್ಟದಲ್ಲಿ ಗೆದ್ದ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಮೂಗು ತೂರಿಸಿ ಆಪರೇಷನ್ ಮೂಲಕ ಕಾಂಗ್ರೆಸ್ ಬಾಲ ಬಿಜೆಪಿ ಕಟ್ ಮಾಡಿ ಅಧಿಕಾರ ಹಿಡಿದಿದೆ. ಅದರೂ..!!
ಕೆಲವೊಂದು ಸಾಂಪ್ರದಾಯಿಕ ಸಂಪಾಜೆ, ಕಲ್ಮಡ್ಕದಂತಹ ಗಟ್ಟಿ, ಪ್ರಾಮಾಣಿಕ ಕಾರ್ಯಕರ್ತರು ಇರುವ ಜಾಗದಲ್ಲಿ ಕಾಂಗ್ರೆಸ್ ತನ್ನ ಪ್ರತಿಷ್ಠೆ ಉಳಿಸಿಕೊಂಡಿದೆ. ಎಂಬುದು ಸತ್ಯ
ಈ ಬಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯೊಬ್ಬರ ಆಯ್ಕೆ!!?
ಪಕ್ಷದ ಸಂಘಟನೆಗೆ ಹೊಸ ಜೀವ ತುಂಬಲು, ಹಾಗೂ ಮಹಿಳಾ ರಾಜಕೀಯದಲ್ಲಿ ಹೆಚ್ಚು ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ, ಈ ಬಾರಿ ಮಹಿಳಾ ಆಕಾಂಕ್ಷಿ ಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿರುವುದು ಕೇಳಿಬರುತ್ತಿದೆ. ಕಾರ್ಯಕರ್ತರ ಅಭಿಪ್ರಾಯ ನಂತರ ತಿಳಿಯಲಿದೆ..
ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ಸಾರಥಿ ಅಯ್ಕೆ ವಿಷಯ ಏಕೆ? ಚರ್ಚೆಗೆ ಗ್ರಾಸವಾಗಿದೆ .!!!
ಕೆಲವು ತಿಂಗಳುಗಳ ಹಿಂದೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಅಧ್ಯಕ್ಷ ಸ್ಥಾನಕ್ಕೆ ರಾಧಾಕೃಷ್ಣ ಇವರನ್ನು ಆಯ್ಕೆ ಮಾಡಿತ್ತು. ಆಯ್ಕೆಯಾದ ಎರಡು ದಿನದಲ್ಲಿ ಇವರ ಅಧ್ಯಕ್ಷ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಇವರು ತಡೆಯನ್ನು ನೀಡಿದರು. ಕೆಲವು ದಿನಗಳ ಹಿಂದೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಅಧ್ಯಕ್ಷ ಸ್ಥಾನಕ್ಕೆ ವೀಕ್ಷಕರನ್ನು ನೇಮಿಸಿ ಇಲ್ಲಿ ವಿಚಾರಣೆ ಮುಗಿದಿದ್ದು ಮತ್ತು ಇದರ ಸಮಗ್ರ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ತಲುಪಿಸಲಾಗಿತ್ತು ಆದರೆ? ಮತ್ತೆ ಗೊಂದಲ ಏರ್ಪಟ್ಟ ಕಾರಣ! ಕೆಪಿಸಿಸಿ ಅಧ್ಯಕ್ಷರು ಸುಳ್ಯಕ್ಕೆ ಪ್ರತ್ಯೇಕ ಕೆಪಿಸಿಸಿ ವತಿಯಿಂದ ವೀಕ್ಷಕರನ್ನು ನೇಮಕ ಮಾಡಿದ್ದು ದಿನಾಂಕ 08/07 2025ರ ಮಂಗಳವಾರದಂದು ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರ, ಅಭಿಪ್ರಾಯ ಪಡೆದು ವರದಿಯನ್ನು ಸಲ್ಲಿಸುವಂತೆ ಆದೇಶ ಮಾಡಿರುತ್ತಾರೆ. ಪ್ರಸ್ತುತ ಸುಳ್ಯದಲ್ಲಿ ಈಗಾಗಲೇ ಸೋಮಶೇಖರ ಕೋಯ0ಗಾಜೆ, ರಾಧಾಕೃಷ್ಣ ಬೋಳ್ಳೂರು, ಸರಸ್ವತಿ ಕಾಮತ್ ಇವರ ನಡುವೆ ಪ್ರಬಲ ಪೈಪೋಟಿ ಏರಿದೆ. ಇದರ ನಡುವೆ ಸಾರ್ವಜನಿಕ ವಲಯದಲ್ಲಿ ಯುವ ಕಾಂಗ್ರೆಸ್ ವಲಯದಲ್ಲಿ ಯುವಕರಿಗೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತಿದ್ದು, ಒಂದು ವೇಳೆ ಯುವಕರಿಗೆ ಮನ್ನಣೆ ನೀಡಿದ್ದಲ್ಲಿ, ಸುಳ್ಯದಲ್ಲಿ ನೋಟರಿ ವಕೀಲರಾದ ಮತ್ತು ತಾಲೂಕು ಪಂಚಾಯತ್ ಇದರ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಂಗಾಜೆ ಇವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಸುಳ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾರ ಪರ ಜೈ ಅನ್ನುತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ನೋಡೋಣ, ಚರ್ಚೆಗೆ ಗ್ರಾಸವಾದ ಈ ಆಯ್ಕೆ ಕೊನೆಗೆ ಯಾರ ಪಾಲಾಗುತ್ತದೆ ಎಂಬುದು ..