ಕನಕಮಜಲು:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನಕಮಜಲು ಇದರ 2025–28ನೇ ಸಾಲಿನ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (SDMC) ಪುನರಚನಾ ಸಭೆ ಇತ್ತೀಚೆಗೆ ಶಾಲಾ ಸಭಾಭವನದಲ್ಲಿ ನಡೆಯಿತು. ಈ ಸಭೆಗೆ ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಹೊಸ SDMC ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ. ಎಂ. ಅಬ್ದುಲ್ ಹಮೀದ್ ಕನಕಮಜಲು ರವರು ಪುನರಾಯ್ಕೆಯಾದರು ಮತ್ತು ಉಪಾಧ್ಯಕ್ಷರಾಗಿ ಹರಿ ನಾಕ್ಸಿ ಅಕ್ಕಿಮಲೆ ರವರು ಆಯ್ಕೆಯಾದರು.ಕಾರ್ಯದರ್ಶಿ – ಮುಖ್ಯ ಶಿಕ್ಷಕಿ ಶ್ರೀಮತಿ ಶೇಷಮ್ಮಕೆ

ಸದಸ್ಯರು:
ಪಿ. ಎ. ಅಬ್ದುಲ್ಲ ಪೆಲ್ತಡ್ಕ ನಾರಾಯಣ ಪಂಜಿಗುಂಡಿ ಶುಭಾಶ್ ಪಂಜಿಗುಂಡಿ ಯಮುನಾ ನೆಡಿಲು ರಮ್ಯಾ ಪಂಜಿಗುಂಡಿ ಅಮೀನ ನೆಡಿಲು ಫಾತಿಮ ಪಂಜಿಗುಂಡಿ ಮೈಮೂನ ಕಂಚಿಲ್ಪಾಡಿ ಸಲ್ಮಾ ಕಂಚಿಲ್ಪಾಡಿ ಫಾತಿಮ ಕನಕಮಜಲು ಭವಾನಿ ಮಾಣಿಕೊಡಿ ವಿಜಯ ಪೂಜಾರಿ ಮನೆ ರೇಖಾ ಮಾಣಿಕೊಡಿ ಸರಿತ ಕಾರಿಂಜ,ಭವ್ಯ ಕಂಚಿಲ್ಪಾಡಿ,ಜಯಂತಿ ಕನ್ನಡ್ಕ

ಇತರ ಸದಸ್ಯರು:
ಆರೋಗ್ಯ ಕಾರ್ಯಕರ್ತೆ: ಪುಷ್ಪಾವತಿ ಅಂಗನವಾಡಿ ಕಾರ್ಯಕರ್ತೆ: ಹೇಮಲತಾ ಕಾಪಿಲ ಸ್ಥಳೀಯ ಜನಪ್ರತಿನಿಧಿ: ಶ್ರೀಧರ ಕುತ್ಯಾಳ ಸಹ ಶಿಕ್ಷಕಿ: ಯಶೋದ ಕೆ.ವಿದ್ಯಾರ್ಥಿ ಪ್ರತಿನಿಧಿ: ಮಹಮ್ಮದ್ ತುಫೈಲ್ ಕೆ. ಎಚ್.
ಸಭೆಯಲ್ಲಿ ನೂತನ ಅಧ್ಯಕ್ಷರಾದ ಕೆ. ಎಂ. ಅಬ್ದುಲ್ ಹಮೀದ್ ರವರು ಸಭೆಯ ಉದ್ದೇಶದ ಕುರಿತು ಭಾಷಣ ಮಾಡಿದರು. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅಧ್ಯಕ್ಷ ಭಾಷಣವನ್ನು ನೆರವೇರಿಸಿದರು
ಮುಖ್ಯ ಶಿಕ್ಷಕಿ ಶ್ರೀಮತಿ ಶೇಷಮ್ಮಕೆ ಯವರು ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಧೈಹಿಕ ಶಿಕ್ಷಕಿ ಶ್ರೀಮತಿ ಯಶೋದ ರವರು ಧನ್ಯವಾದ ಅರ್ಪಿಸಿದರು.
ಸಭೆಯಲ್ಲಿ ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು..





m
