ಕೊಡಗು : ಕೊಯನಾಡು
ಕೊಯನಾಡು, ಜುಲೈ 25: ದೇವರಕೊಲ್ಲಿ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಯುವಕರು ದುರ್ಘಟನೆಯುಸಿರೆಳೆದಿದ್ದಾರೆ. ಗೋಣಿಕೊಪ್ಪದಿಂದ ಮಂಗಳೂರು ಉಳ್ಳಾಲದ ಕಡೆಗೆ ತೆರಳುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರಾದವರನ್ನು ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲದ ರೀಶಾದ್, ನಿಹಾದ್, ರಾಖೀಬ್ ಮತ್ತು ಅನೀಷ್ ಎಂದು ಗುರುತಿಸಲಾಗಿದೆ. ಸ್ನೇಹಿತರಾಗಿ ಉಳ್ಳಾಲಕ್ಕೆ ತೆರಳುತ್ತಿದ್ದ ಇವರು, ದಾರಿ ಮಧ್ಯೆ ಅಪಘಾತಕ್ಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಸುಳ್ಯ ಅಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಹಾಗೂ ಸ್ಥಳೀಯರು, ಕಾರಿನಲ್ಲಿ ಸಿಲುಕಿದ್ದ ಯುವಕರನ್ನು ರಕ್ಷಿಸಿ ಹರಸಾಹಸ ಪಟ್ಟರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಎಲ್ಲರೂ ಪ್ರಾಣತೆತ್ತಿದ್ದರು.

ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಶೋಕ ಮನೆಮಾಡಿದ್ದು, ಸ್ಥಳೀಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.





m

