Featured, ಅಂಕಣ, ಸ್ಥಳೀಯ

ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

ಇಂದಿನ ಯುವ ಜನಾಂಗ ಸ್ವಾತಂತ್ರ್ಯ ಮತ್ತು ಸ್ವಾತಂತ್ರದ ಮಹತ್ವವನ್ನು ತಿಳಿದುಕೊಳ್ಳಬೇಕು: ನಿವೃತ್ತ ಸೇನಾನಿ, ಕೆ. ವಿ. ಸಚಿನ್ ಕರೆ

ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಸೇನಾನಿಯಾಗಿರುವ ,ಕೆ.ವಿ.ಸಚಿನ್ ಕೀಲಾರು, ಧ್ವಜಾರೋಹಣ ನೆರವೇರಿಸಿ, ಇಂದಿನ ಯುವ ಜನಾಂಗ ಸ್ವಾತಂತ್ರದ ಮಹತ್ವವನ್ನು ಅರಿಯಬೇಕು. ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿ ಬಲಿದಾನ ಮಾಡಿ, ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು, ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರು, ಎಂ ಶಂಕರನಾರಾಯಣ ಭಟ್ ಮಾತನಾಡಿ ,ವಿದ್ಯಾರ್ಥಿಗಳಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳು ಇಂದಿನ ದಿನಗಳಲ್ಲಿ ತುಂಬಾ ಅವಶ್ಯಕತೆ ಇದೆ ,ಅನೇಕ ಹಿರಿಯ ವ್ಯಕ್ತಿಗಳ ತ್ಯಾಗ ಬಲಿದಾನಗಳನ್ನು ನಾವು ಯಾವಾಗಲೂ ಸ್ಮರಿಸಿಕೊಂಡು, ಉತ್ತಮಮೌಲ್ಯಗಳಿಂದ ಜೀವನ ನಡೆಸಬೇಕು ಎಂದು ಹೇಳಿದರು. ನಬಾರ್ಡ್, ನ ನಿವೃತ್ತ, ಸಹಾಯಕ ಮಹಾ ಪ್ರಬಂಧಕರಾದ,ಮುಂಡಂಡ.ಸಿ ನಾಣ್ಣಯ್ಯನವರು,ಮಾತನಾಡಿ ವಿದ್ಯಾರ್ಥಿಗಳು ತಂದೆ-ತಾಯಿಗಳು ಮತ್ತು ಹಿರಿಯರನ್ನು ಗೌರವಿಸಿ ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಪ್ರಜೆಗಳಾಗಿ ಜೀವಿಸಿದರೆ, ಅದುವೇ ನೀವು ದೇಶಕ್ಕೆ ನೀಡಿದ ಕೊಡುಗೆ ಎಂದು ಹೇಳಿದರು. ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷರು, ಕೆ.ಕಿಶೋರ್ ಕುಮಾರ್ , ಮಾತನಾಡಿ,ವಿದ್ಯಾರ್ಥಿಗಳು ದೇಶ ಪ್ರೇಮದೊಂದಿಗೆ ಇಂದಿನ ತಂತ್ರಜ್ಞಾನವನ್ನು ಹೊಂದುವುದರ ಮೂಲಕ,ಆಧುನಿಕ ಜ್ಞಾನವನ್ನು ಪಡೆಯಬೇಕಾಗಿದೆ ಎಂದು ಹೇಳಿದರು.ಇದೇ ವೇಳೆ ಸಭಾ ಕಾರ್ಯಕ್ರಮದಲ್ಲಿ ನಿವೃತ ಸೇನಾನಿ, ಸಚಿನ್ ಕೆ .ವಿ .ಕೀಲಾರು, ಚೆಂಬು ಗ್ರಾಮ ಪಂಚಾಯಿತಿಯ ಸದಸ್ಯರಾದ, ಹೆಚ್.ರಮೇಶ್ ಹಾಗೂ ನಬಾರ್ಡ್ ನಿವೃತ್ತ ಸಹಾಯಕ ಮಹಾ ಪ್ರಬಂಧಕರಾದ,ಮುಂಡಂಡ,ಸಿ.ನಾಣಯ್ಯ,ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷರು, ಕೆ .ಕಿಶೋರ್ ಕುಮಾರ್ ,ಇವರುಗಳನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಸಂಸ್ಥೆಗೆ ನೀಡಿರುವ ಸ್ಮಾಟ್ ಕ್ಲಾಸ್ ಹಾಗೂ ಗಾಣಿಗದ್ದೆ ದಿವಂಗತ. ಕೃಷ್ಣಮೂರ್ತಿ ಭಟ್ಟರವರ ಸ್ಮರಣಾರ್ಥ, ಮಕ್ಕಳ ಕೊಡುಗೆಯಾಗಿ, ನೆಲಕ್ಕೆ ಟೈಲ್ ಅಳವಡಿಸಿ ನವೀಕರಣಗೊಂಡ ಕೊಠಡಿಯನ್ನು ಉದ್ಘಾಟಿಸಲಾಯಿತು. ಸ್ವಾತಂತ್ರ್ಯ ದಿನದ ನೆನಪಿಗಾಗಿ ವನಮಹೋತ್ಸವವನ್ನು,ಆಚರಿಸಲಾಯಿತು, ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿಕಟಪೂರ್ವ ಸಂಚಾಲಕರು ಕೊಂದಲಕಾಡು, ನಾರಾಯಣ ಭಟ್, ಕೋಶಾಧಿಕಾರಿ ಪದ್ಮಯ್ಯಗೌಡ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ದ. ಕ. ಸಂಪಾಜೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಹನೀಫ್ ಮುಂತಾದವರು ಉಪಸ್ಥಿತರಿದ್ದರು.ಸಂಪಾಜೆ ಲಯನ್ಸ್ ಕ್ಲಬ್ ನ ಹಲವು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲರು ಬಿ.ಲೋಕ್ಯಾ ನಾಯ್ಕ್, ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರು,ಎ .ಐತಪ್ಪ, ವಂದಿಸಿದರು,ಪ್ರೌಢಶಾಲಾ ಸಹ ಶಿಕ್ಷಕರ ಹೆಚ್. ಜಿ. ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ, ವಿದ್ಯಾ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರ ಪಟ್ಟಿ ವಾಚಿಸಿದರು.

m

Related Posts