Featured, ಇತರೆ, ಸ್ಥಳೀಯ

ಕಾಸರಗೋಡು: ಕ್ರೇನ್ ದುರಂತ – ಇಬ್ಬರು ಕಾರ್ಮಿಕರು ಸಾವು

ಕಾಸರಗೋಡು

ಮೊಗ್ರಾಲ್ ಪುತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸೆಪ್ಟೆಂಬರ್ 11ರಂದು ಮಧ್ಯಾಹ್ನ ನಡೆದ ಭೀಕರ ಕ್ರೇನ್ ಅವಘಡದಲ್ಲಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.

ಮೃತರು ಕೋಝಿಕ್ಕೋಡ್‌ನ ವಡಗರದ ಅಕ್ಷಯ್ (30) ಮತ್ತು ಅಶ್ವಿನ್ (30) ಎಂದು ಗುರುತಿಸಲಾಗಿದೆ. ವಿದ್ಯುತ್ ದೀಪ ಅಳವಡಿಕೆಯಲ್ಲಿ ನಿರತವಾಗಿದ್ದ ಕ್ರೇನ್‌ನ ಬಾಕ್ಸ್ ಇದ್ದಕ್ಕಿದ್ದಂತೆ ಕುಸಿದು ಸರ್ವಿಸ್ ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.

ಅಕ್ಷಯ್ ಕುಂಬಳೆ ಆಸ್ಪತ್ರೆಯಲ್ಲಿ, ಅಶ್ವಿನ್ ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾದ ನಿಖರ ಮಾಹಿತಿ ಗೊತ್ತಾಗಬೇಕಿದೆ.

m

Related Posts