Featured, ಇತರೆ, ಸ್ಥಳೀಯ

ಅಮ್ರೋ 11ನೇ ವಾರ್ಷಿಕೋತ್ಸವ: ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ವತಿಯಿಂದ ಧನಸಹಾಯ ಮತ್ತು ಗೌರವ ಸಮರ್ಪಣಾ ಸಮಾರಂಭ

ಸುಳ್ಯ ತಾಲೂಕಿನ ಗ್ರಾಮೀಣ ಹುಡುಗಿ ನಾಡಿನ ರಕ್ಷಣೆಗಾಗಿ ಬಿಎಸ್‌ಎಫ್‌ಗೆ ಆಯ್ಕೆಯಾದ ಸುಶ್ಮಿತಾ ಬೆದ್ರಪಣೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಸುಳ್ಯ: ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಸುಳ್ಯ ಶಾಖೆಯ ವತಿಯಿಂದ ಅಖಿಲ ಭಾರತೀಯ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ (AMRO) ಇದರ ಹನ್ನೊಂದನೇ ವಾರ್ಷಿಕ ವಾರ್ಷಿಕೋತ್ಸವ ಸೆಪ್ಟೆಂಬರ್ 11 ರಂದು ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಧನ ಸಹಾಯ ಸೂಚನೆ, ಬಿಎಸ್‌ಎಫ್‌ಗೆ ಆಯ್ಕೆಯಾಗಿ ನಾಡಿನ ರಕ್ಷಣೆಗಾಗಿ ಸೇವೆ ಸಲ್ಲಿಸಲು ಸಜ್ಜಾಗಿರುವ ಸುಳ್ಯದ ಗ್ರಾಮೀಣ ಭಾಗದ ಯುವತಿ ಸುಶ್ಮಿತಾ ಬೆದ್ರಪಣೆಯವರಿಗೆ ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ .ಬಿ ಸುಧಾಕರ ರೈ ಅವರು ಆಮ್ರೋ 11ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಹಂಚುವ ಮೂಲಕ ಆಚರಿಸಿದರು.

ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶುಭ ಷರೀಫ್ ಜಟ್ಟಿಪಳ್ಳ ಹಾರಿಸಿದರು.
ಮೊಬೈಲ್ ರಿಟೇಲರ್ಸ್ ಅಸೋಸಿಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಗಂ ಅಧ್ಯಕ್ಷತೆ ವಹಿಸಿದ್ದರು

ಉಡುಪಿ ಮತ್ತು ದ.ಕ ಜಿಲ್ಲಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಶೈಲೇಂದ್ರ ಸರಳಾಯ, ಸುಳ್ಯ ತಾಲೂಕು ಮಾಜಿ ಅಧ್ಯಕ್ಷ ಶಬ್ಬೀರ್ ಆರ್ಕುಟ್ ವೇದಿಕೆಯಲ್ಲಿ . ಅಧ್ಯಕ್ಷ ರಹಿಮಾನ್  ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಮದನ್ ನಿರೂಪಿಸಿದರು. ಸುಳ್ಯ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ ಪಧಾದಿಕಾರಿಗಳು,ಸದಸ್ಯರು ಭಾಗವಹಿಸಿದರು.

m

Related Posts