Featured, ಅಂಕಣ, ಸ್ಥಳೀಯ

ಇಂದು ಯುಎಇ ವತಿಯಿಂದ ಮಂಗಳೂರಿನಲ್ಲಿ ಕಮ್ಯುನಿಟಿ ಯೂತ್‌ ಲೀಡರ್ಸ್ ಮೀಟ್

ಸುಳ್ಯ: ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಶನ್ ವತಿಯಿಂದ ಸೆ.12 ರಂದು ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025 ಮಂಗಳೂರಿನ ಇಂಡಿಯಾನ ಕನ್ವೆನ್ಸನ್ ಸೆಂಟರ್ನನಲ್ಲಿ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯ ಶರೀಫ್ ಕಂಠಿ ತಿಳಿಸಿದರು. ಅವರು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಂಗಳೂರು, ಪಡುಬಿದ್ರಿ, ಉಳ್ಳಾಲ, ಬಂಟ್ವಾಳ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಕೈಕಂಬ- ಬಜ್ಪೆ, ಮೂಡಬಿದ್ರಿ ಕಾರ್ಕಳ, ಸುಳ್ಯ, ಸುರತ್ಕಲ್, ಜೋಕಟ್ಟೆ ಕಾಪು, ಉಪ್ಪಿನಂಗಡಿ, ಫರಂಗಿಪೇಟೆ, ಶಿರೂರ್, ಮತ್ತು ಕುಂದಾಪುರ ವಲಯ ವ್ಯಾಪ್ತಿಯ ಯುವಕರನ್ನು ಒಟ್ಟುಗೂಡಿಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಸಮುದಾಯದ ಸಬಲೀಕರಣ ಅಭಿವೃದ್ಧಿಯತ್ತ ಕೊಂಡುಹೋಗುವ ಸಂಸ್ಥೆಯಾಗಿದ್ದು ಕ್ರೀಡಾಪಟುಗಳನ್ನು ಸಿದ್ದಪಡಿಸಿ ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸುಳ್ಯ ರೋನ್ ಅಧ್ಯಕ್ಷ ಫೈಝಲ್ ಕಟ್ಟೆಕ್ಕಾರ್, ಕಾರ್ಯದರ್ಶಿ ಮುನಾಫರ್, ಇಕ್ಷಾಲ್ ಸುಣ್ಣಮೂಲೆ, ಮನೀಶ್ ಶೈನ್, ಮುನೀರ್ ಶೈನ್, ಅಬ್ದುಸಾಲಿ ಫೈಚಾರ್, ಸಿದ್ದೀಕ್, ನಿಯಾಝ್ ಶೈನ್ ಉಪಸ್ಥಿತರಿದ್ದರು.

m

Related Posts