ಸುಳ್ಯ: ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ. ಜನ್ಮದಿನದ ಮಾಸಾಚರಣೆಯ ಅಂಗವಾಗಿ, ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ಬೃಹತ್ ಪ್ರವಾದಿ ಸಂದೇಶ ಕಾಲ್ನಾಡಿಗೆ ಜಾಥಾ ಹಾಗೂ “ಅರಿಯಿರಿ ಮನುಕುಲದ ಪ್ರವಾದಿಯನ್ನ” ಎಂಬ ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ ಇಂದು (ಸೆಪ್ಟೆಂಬರ್ 13) ಸುಳ್ಯದಲ್ಲಿ ನಡೆಯಲಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಕೆ.ಎಸ್. ಉಮ್ಮರ್, ಕಳೆದ ಇಪ್ಪತ್ತಮೂರು ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ತಾಲೂಕು ಮೀಲಾದ್ ಸಮಿತಿ ಪ್ರವಾದಿ ಸಂದೇಶ ಜಾಥಾ ಮತ್ತು ಸಾರ್ವಜನಿಕ ಸಭೆ ನಡೆಸುತ್ತಾ ಬಂದಿದೆ. ಈ ಸಲ ಪ್ರವಾದಿ ಮಹಮ್ಮದ್ ಮುಸ್ತಫಾ (ಸ ಅ ) ರವರ 1500 ನೇ ಜನ್ಮದಿನದ ಮಾಸಾಚರಣೆ ಬಹಳ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬೃಹತ್ ಮೀಲಾದ್ ಕಾಲ್ನಡಿಗೆ ಜಾಥ ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭ…!!
ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮದಿನದ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಹಮ್ಮಿಕೊಂಡ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥ (13/09/2025) ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಮೊಗರ್ಪಣೆ ಮಸೀದಿ ಬಳಿಯಿಂದ ಹೊರಡಲಿದೆ ಈ ಕಾಲ್ನಡಿಗೆ ಜಾಥಾದಲ್ಲಿ ಪ್ರವಾದಿ ಸಂಕೀರ್ತನೆ ಪ್ರವಾದಿ ಸಂದೇಶ ಸಾರುವ ಘೋಷವಾಕ್ಯ ಇಸ್ಲಾಮಿಕ್ ಸಾಂಪ್ರದಾಯಿಕ ಕಲೆಗಳ ದಫ್ ತಂಡ ಶಿಸ್ತು ಬದ್ದ ಸ್ಕೌಟ್ ತಂಡಗಳ ಪಥಸಂಚಲನ ಇನ್ನಿತರ ಸೇರಿದಂತೆ ಮೂವತ್ತು ತಂಡಗಳು ಕಾಲ್ನಡಿಗೆ ಜಾಥದಲ್ಲಿ ಕಣ್ಮನ ಸೆಳೆಯಲಿದೆ ಕಾಲ್ನಡಿಗೆ ಜಾಥ ಮೊಗರ್ಪಣೆಯಿಂದ ಆರಂಭಗೊಂಡು ಸುಳ್ಯ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ ಸಮಾಪ್ತಿ ಗೊಳ್ಳಲಿದೆ
ದಫ್, ಸ್ಕೌಟ್, ಫ್ಲವರ್ ಶೋ, ಕಳರಿ, ತಂಡಗಳ ಪ್ರಾಯೋಜಕತ್ವ
ತಾಲೂಕು ಮೀಲಾದ್ ಸಮಿತಿ ಸುಳ್ಯ, ಗ್ರೀನ್ ಬಾಯ್ಸ್ ಜಟ್ಟಿಪಳ್ಳ, KA 21 ವಾಟ್ಸಪ್ ಗ್ರೂಪ್, ಜೆ ಬಿ ಯುನೈಟೆಡ್ ಗಾಂಧಿನಗರ, ಟೀಮ್ ಬಾಯ್ಸ್ ಸುಳ್ಯ, BMA ಗ್ರೂಪ್ ಸುಳ್ಯ, ದುಲ್ಫುಕಾರ್ ದಫ್ ಗಾಂಧಿನಗರ ಸುಳ್ಯ, ಗಾಂಧಿನಗರ ಮತ್ತು ಅನ್ಸಾರಿಯಾ ಮದರಸ ವಿಧ್ಯಾರ್ಥಿಗಳ ಫ್ಲವರ್ ಶೋ ಪಥ ಸಂಚಲನ, ಕೊಯನಾಡು, ಸಂಪಾಜೆ, ಕಲ್ಲುಗುಂಡಿ, ಗೂನಡ್ಕ, ಅರಂತೋಡು, ಪೆರಾಜೆ, ಮದರಸ ವಿಧ್ಯಾರ್ಥಿಗಳ ದಫ್ ಹಾಗೂ ಆಲ್ ಅಮೀನ್ ಪೈಚಾರ್ ದಫ್ ತಂಡದ ವಿಧ್ಯಾರ್ಥಿಗಳ ದಫ್ ತಂಡ.
ಸಂಜೆ ಗಂಟೆ ಏಳಕ್ಕೆ “ಅರಿಯಿರಿ ಮನುಕುಲದ ಪ್ರವಾದಿಯನ್ನ” ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ
ಸಂಜೆ ಗಂಟೆ 7.00 ರಿಂದ ಆರಂಭವಾಗಲಿರುವ ‘ಆರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಹದಿ ಉದ್ಘಾಟಿಸಲಿದ್ದು, ಸಯ್ಯದ್ ತಾಹಿರ್ ಸಹದಿ ತಂಙಳ್ ದುವಾ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಕೇರಳದ ಪ್ರಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ಹಾಗೂ ಪ್ರಭಾಷಣಗಾರರಾಗಿ ಎಸ್ ಎಂ ಬಶೀರ್ ಮಂಜೇಶ್ವರ, ಹುಸೇನ್ ಅಹ್ಸನಿ ಮೂರ್ನಾಡ್, ರಿಯಾಝ್ ಕಡಂಬು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಧಾರ್ಮಿಕ, ಸಾಮಾಜಿಕ ನೇತಾರರು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ಅಧ್ಯಕ್ಷರಾದ ಜುನೈದ್ ಎನ್ ಎ, ಕಾರ್ಯದರ್ಶಿ, ಅಜೀಜ್ ಸಂಗಮ್, ಕೋಶಾಧಿಕಾರಿ ಉನೈಸ್ ಪೆರಾಜೆ, ರಶೀದ್ ಜಟ್ಟಿಪಳ್ಳ, ಇಕ್ಬಾಲ್ ಸುಣ್ಣಮೂಲೆ, ಕಾದರ್ ಸಂಗಮ್, ನಮಾಝ್ ಜಯನಗರ. ಉಪಸ್ಥಿತರಿದ್ದರು





m

