ಕರಾವಳಿ ಕಿಂಗ್ಸ್ ಪ್ರಥಮ – ಅಸ್ತ್ರ ಅವೇಂಜರ್ಸ್ ದ್ವಿತೀಯ
ಸುಳ್ಯ: ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ.) ಪೈಚಾರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ (SBA) ಇವರ ಸಂಯುಕ್ತಾಶ್ರಯದಲ್ಲಿ ಸುಳ್ಯ, ಕಡಬ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಭಾನುವಾರ (14-09-2025) ಸುಳ್ಯದ SBA ಒಳಾಂಗಣ ಕ್ರೀಡಾಂಗಣ, ಕುರುಂಜಿಭಾಗ್ನಲ್ಲಿ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಸಂಸ್ಥೆಯ ಪ್ರ. ಕಾರ್ಯದರ್ಶಿ ಅಕ್ಷಯ್ ಕೆ.ಸಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಅಧ್ಯಕ್ಷ ರಿಫಾಯಿ ಎಸ್.ಎ ವಹಿಸಿದರು.

ವೇದಿಕೆಯಲ್ಲಿ ಮುಜೀಬ್ ಪೈಚಾರ್ (ಸದಸ್ಯರು, ಜಾಲ್ಸೂರು ಗ್ರಾಮ ಪಂಚಾಯತ್), ಹೇಮಂತ್ ಕಾಮತ್ (ಅಧ್ಯಕ್ಷರು, ರೋಟರಿ ಸಿಟಿ ಸುಳ್ಯ), ನಝೀರ್ ಶಾಂತಿನಗರ (ಅಧ್ಯಕ್ಷರು, ಎಸ್ಡಿಎಂಸಿ ಶಾಂತಿನಗರ ಶಾಲೆ), ಉದ್ಯಮಿ ರಾಜೇಶ್ ಕಿರಿಬಾಗ (ಆದಿಲಕ್ಷಿ ಕನ್ಸ್ಟ್ರಕ್ಷನ್), ಹಿರಿಯ ಕ್ರೀಡಾಪಟು ಅಬ್ದುಲ್ ರಹಮಾನ್, ಹನೀಫ್ ಅಲ್ಫಾ ಹಾಗೂ ಸತ್ತಾರ್ ಪಿ.ಎ ಉಪಸ್ಥಿತರಿದ್ದರು.
ಪಂದ್ಯಾವಳಿಯ ಮದ್ಯದಲ್ಲಿ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.

ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಸಿರಾಜ್ ಮೈಲ್ ಕಾಲ್ ಮಾಲೀಕತ್ವದ ಕರಾವಳಿ ಕಿಂಗ್ಸ್ ಪ್ರಥಮ ಸ್ಥಾನ ಹಾಗೂ ಸತ್ತಾರ್ ಪೈಚಾರ್ ಮಾಲೀಕತ್ವದ ಅಸ್ತ್ರ ಅವೇಂಜರ್ಸ್ ದ್ವಿತೀಯ ಸ್ಥಾನ ಗಳಿಸಿದರು.
ಬಹುಮಾನ ವಿತರಣೆಯನ್ನು ಆದರ್ಶ ವಿವಿದೋದ್ದೇಶ ಸಹಕಾರಿ ಸಂಘದ ವ್ಯವಸ್ಥಾಪಕರಾದ ಮನೋಜ್ ಕುಮಾರ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್.ಬಿ, ನಿವೃತ್ತ ಮೆಸ್ಕಾಂ ಇಂಜಿನಿಯರ್ ಬೋರಯ್ಯ, SBA ನಿರ್ದೇಶಕ ವಿಜಯ ಪ್ರಕಾಶ್, SBA ಸದಸ್ಯರಾದ ಗುರು ವಿಕ್ರಂ ಪ್ರಸಾದ್, ಮಹೇಶ್ ಎಂ, ಪ್ರೀತಮ್, ರಂಜಿತ್ ಹಾಗೂ ಮಾರ್ನಿಂಗ್ ಕ್ರಿಕೆಟರ್ಸ್ ಸದಸ್ಯರಾದ ಬಶೀರ್ ಕೆ.ಪಿ, ಅಶ್ರಫ್ ಅದರ್ಶ ಮತ್ತಿತರರು ನೆರವೇರಿಸಿದರು.
ನಾಸೀರ್ ಕೆ.ಪಿ ಸ್ವಾಗತಿಸಿ, ಚೇತನ್ ಪೈಚಾರ್ ವಂದಿಸಿದರು





m
