Featured, ಅಂಕಣ, ಸ್ಥಳೀಯ

ಆರೋಗ್ಯ ಸೇವಾ ಕ್ಷೇತ್ರಕ್ಕೆ ಮರ್ಕಝ್ 48 ವೈದ್ಯರ ಸಮರ್ಪಣೆ:

2019ರಿಂದ ಮರ್ಕಝ್ ಯೂನಾನಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದವರಾಗಿದ್ದಾರೆ ‘ಹಿಕ್‌ಮೊರ’ದಲ್ಲಿ ಪ್ರಮಾಣಪತ್ರ ಸ್ವೀಕರಿಸಿದವರು

ನಾಲೆಜ್ ಸಿಟಿ (ಕಲ್ಲಿಕೋಟೆ): ಆರೋಗ್ಯ ಹಾಗೂ ಆತುರ ಸೇವಾ ಕ್ಷೇತ್ರಕ್ಕೆ ಮರ್ಕಝ್ ಯೂನಾನಿ ಮೆಡಿಕಲ್ ಕಾಲೇಜಿನಿಂದ ಈ ವರ್ಷವೂ ಕೂಡ 48 ವೈದ್ಯರು ಸೇವಾ ರಂಗಕ್ಕಿಳಿದಿದ್ದಾರೆ. ಕೇರಳದ ಏಕೈಕ ಯೂನಾನಿ ಮೆಡಿಕಲ್ ಕಾಲೇಜಾದ ಮರ್ಕಝ್ ಯೂನಾನಿ ಮೆಡಿಕಲ್ ಕಾಲೇಜಿನಲ್ಲಿ 2019ರಿಂದ ಅಧ್ಯಯನ ನಡೆಸಿದ್ದ ವಿದ್ಯಾರ್ಥಿಗಳೇ ನಿನ್ನೆ ನಡೆದ ‘ಹಿಕ್‌ಮೊರ’ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಮಾಣಪತ್ರ ಸ್ವೀಕರಿಸಿದವರು.

ಕೇರಳ ಆಯುರ್ವೇದ ಮೆಡಿಕಲ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಟಿ.ಡಿ. ಶ್ರೀಕುಮಾರ್ ಸಮಾರಂಭ ಉದ್ಘಾಟಿಸಿದರು. ಹೊಸ ಯುಗದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಬಲ್ಲವರು ಯೂನಾನಿ ಸೇರಿದಂತೆ ಇತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು ಎಂದು ಅವರು ಹೇಳಿದರು. “ಆರೋಗ್ಯ ಸಮಾಜ”ವೆಂಬ ಗುರಿ ಮನದಟ್ಟುಮಾಡಿಕೊಂಡು ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಮರ್ಕಝ್ ನಾಲೆಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ರವರು ಅಧ್ಯಕ್ಷತೆ ವಹಿಸಿದರು. ಶಾಸಕ ಲಿಂಟೋ ಜೋಸೆಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇರಳ ಯೂನಾನಿ ಮೆಡಿಕಲ್ ಅಸೋಸಿಯೇಷನ್ ಸ್ಥಾಪಕ ಡಾ. ಕೆ.ಟಿ. ಅಜ್ಮಲ್, ನಾಲೆಜ್ ಸಿಟಿ ಸಿ.ಎ.ಒ. ಅಡ್ವೊ. ತನ್ವೀರ್ ಉಮರ್, ಡಾ. ಯು.ಕೆ. ಹಾಫಿಳ್ ಮುಹಮ್ಮದ್ ಶರೀಫ್, ಪ್ರೊ. ಡಾ. ಸಲ್ಮಾ ಬಾನು, ಡಾ. ಓ.ಕೆ.ಎಂ. ಅಬ್ದುರ್ ರಹ್ಮಾನ್, ಡಾ. ಶೈಖ್ ಮುಹಮ್ಮದ್ ಇಝ್ಹಾಕ್, ಡಾ. ಹಸ್ನ ಟಿ.ವಿ., ಡಾ. ಹನಾ ಬಿಂಸಿ, ಡಾ. ಸಹಲ್ ಕೆ.ಟಿ. ಮಾತನಾಡಿದರು.

ಪ್ರಿನ್ಸಿಪಾಲ್ ಡಾ. ಯು. ಮುಜೀಬ್ ಸ್ವಾಗತಿಸಿದರು ಮತ್ತು ಪ್ರೊ. ಡಾ. ನಾಸಿಯಾ ಫರ್ಹೀನ್ ಧನ್ಯವಾದ ಹೇಳಿದರು.

m

Related Posts