Featured, ಅಂಕಣ, ಸ್ಥಳೀಯ

ಪೊಲೀಸರ ನಿರ್ಲಕ್ಷ್ಯವೇ ಹತ್ಯೆ ಗೆ ಕಾರಣ !? ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಿ, ಇಲ್ಲವೇ ನಮಗೆ ಒಪ್ಪಿಸಿ: ಯಾಮಿನಿ ಕುಟುಂಬಸ್ಥರು

ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶ್ರೀರಾಂಪುರ ಪೊಲೀಸ್ ಠಾಣೆ ಎದುರು ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶಭರಿತ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು, “ಕಾನೂನು ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಇಲ್ಲವಾದರೆ ನಮ್ಮ ಕೈಗೆ ಒಪ್ಪಿಸಿ — ನಾವೇ ಶಿಕ್ಷೆ ನೀಡುತ್ತೇವೆ” ಎಂದು ಘೋಷಣೆ ಕೂಗಿದರು.

ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾ, “ನಗರದ ಮಧ್ಯಭಾಗದಲ್ಲೇ ಆರೋಪಿ ಚಾಕು ಹಿಡಿದು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಂದಿನ ಪೊಲೀಸರಿಗೆ ಅಪರಾಧಿಗಳ ಮೇಲೆ ಯಾವುದೇ ಭಯವೇ ಇಲ್ಲ” ಎಂದು ಟೀಕಿಸಿದರು.

ಪೊಲೀಸರ ನಿರ್ಲಕ್ಷ್ಯವೇ ಕಾರಣ?

ಸ್ಥಳೀಯರ ಪ್ರಕಾರ, ಆರೋಪಿ ವಿಘ್ನೇಶ್ ಹಲವು ಬಾರಿ ಯಾಮಿನಿ ಪ್ರಿಯಾ ಅವರನ್ನು ಅಡ್ಡಗಟ್ಟಿ ಪ್ರೀತಿಸಲು ಒತ್ತಾಯಿಸುತ್ತಿದ್ದ. ಹಿಂದೆ ಬಲವಂತವಾಗಿ ತಾಳಿ ಕಟ್ಟಿದ್ದ ಘಟನೆಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಆ ವೇಳೆ ಪೊಲೀಸರು ಆರೋಪಿಯನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದಷ್ಟೇ ಮಾಡಿದ್ದಾರೆ. “ಆ ಸಮಯದಲ್ಲೇ ಬಂಧನ ಮಾಡಿದ್ದರೆ ಈ ದುರಂತ ಸಂಭವಿಸದೇ ಇರಬಹುದಿತ್ತು,” ಎಂದು ಸ್ಥಳೀಯರು ದೂರಿದರು.ಘಟನೆಯ ಬಳಿಕ ಯಾಮಿನಿಯ ಪೋಷಕರು ಮಗಳ ನೆನಪಿನಲ್ಲಿ ಕಣ್ಣೀರಿಟ್ಟರು.

ಶ್ರೀರಾಂಪುರದ ಬಳಿಯ ಸ್ವತಂತ್ರಪಾಳ್ಯದ ನಿವಾಸಿ ವಿಘ್ನೇಶ್ (28), ಯಾಮಿನಿ ಪ್ರಿಯಾ ಅವರನ್ನು ಪ್ರೀತಿಸಲು ಒತ್ತಾಯಿಸುತ್ತಿದ್ದ. ಪ್ರಿಯಾ ನಿರಾಕರಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಖಾರದ ಪುಡಿ ಎರಚಿ, ಚಾಕುವಿನಿಂದ ಕತ್ತು ಕೊಯ್ದು ಕೊಲೆಮಾಡಿ ಪರಾರಿಯಾಗಿದ್ದ. ನಂತರ, ಸೋಲದೇವನಹಳ್ಳಿ ಬಳಿ ಶ್ರೀರಾಂಪುರ ಪೊಲೀಸರು ಆರೋಪಿ ವಿಘ್ನೇಶ್ ಹಾಗೂ ಸಹಆರೋಪಿ ಹರೀಶ್ (36) ಅವರನ್ನು ಬಂಧಿಸಿದ್ದಾರೆ.

m

Related Posts