Featured, ಅಂಕಣ, ಸ್ಥಳೀಯ

ಡಾ. ಕೆ. ವಿ. ಚಿದಾನಂದ ರಿಗೆ 70 ರ ಸಂಭ್ರಮ

ಸರಕಾರಿ ಜೂನಿಯರ್ ಕಾಲೇಜು ಅಮೃತ ಮಹೋತ್ಸವ ಸಮಿತಿಯಿಂದ ಶುಭಾಶಯ ಕೋರಿ ಸನ್ಮಾನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಡಾ. ಕೆ ವಿ ಸಿ ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿ : ಎಂ. ಬಿ. ಸದಾಶಿವ

ಪ್ರತಿಷ್ಠಿತ ಡಾ. ಬಿ. ಸಿ. ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ( ರಿ) ಇದರ ಅಧ್ಯಕ್ಷರು ಹಾಗೂ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು   

ಎಂಡಿ ಡಾ. ಕೆ. ವಿ. ಚಿದಾನಂದ ರವರು 70 ನೇ ಹುಟ್ಟುಹಬ್ಬ ಆಚರಿಸುವ ಸಂದರ್ಭದಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳು ಸಮಿತಿ ವತಿಯಿಂದ ಜನ್ಮ ದಿನದ ಶುಭಾಶಯ ಕೋರಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಪ್ರದಾನ ಕಾರ್ಯದರ್ಶಿ ಎಂ. ಬಿ. ಸದಾಶಿವ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಡಾ. ಕೆವಿಸಿ ಯವರು ಕುರುಂಜಿ ವೆಂಕಟ್ರಮಣ ಗೌಡರ ಹಾದಿಯಲ್ಲಿ ಮುನ್ನಡೆದು ಸುಳ್ಯದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ 

ಅಮೃತ ಮಹೋತ್ಸವ ಆಚರಿಸುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಯಾಗಿ ಕಾಲೇಜು ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ ಎಂದು ಶ್ಲಾಘಿಸಿದರು, ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಚಿದಾನಂದ ರ ಸಹಪಾಠಿ ಗಿರೀಶ್ ಭಾರದ್ವಾಜ್ ಸಮಿತಿ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ, ಸಂಘಟನಾ ಕಾರ್ಯದರ್ಶಿ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಪ್ರಾoಶುಪಾಲರಾದ ಮೋಹನ್ ಬೊಮ್ಮಟ್ಟಿ, ಉಪ ಪ್ರಾoಶುಪಾಲ ಪ್ರಕಾಶ್ ಮೂಡಿತ್ತಾಯ, ಸಮಿತಿ ಸದಸ್ಯ ಪಿ. ಎ. ಮಹಮ್ಮದ್, ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

m

Related Posts