Featured, ಇತರೆ, ಸ್ಥಳೀಯ

ಸುಳ್ಯ AVSS ಶಾಖೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುಳ್ಯ: AVSS ಸುಳ್ಯ ಶಾಖೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು AVSS ಸುಳ್ಯ ಶಾಖೆ ಉಪಾಧ್ಯಕ್ಷರಾದ ಚೋಮ ಗಾಂಧಿನಗರರವರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಖೆಯ ಸ್ಥಾಪಕರಾದ ಮನೋಹರ್ ಪಿ.ಬಿ. ಪಲ್ಲತ್ತಡ್ಕರವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ನೆರವೇರಿಸಿದರು. ಮಾಲಾರ್ಪಣೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಬಾಬು ಜಾಲ್ಸೂರು ರವರು ಗೈದರು

ಮುಖ್ಯ ಅತಿಥಿಗಳಾಗಿ AVSS ಶಾಖೆಯ ಸ್ಥಾಪಕರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ ಹಾಗೂ ನಿರ್ದೇಶಕರಾದ ಹರೀಶ್ ಎಂ.ಎಸ್. ಮೇನಾಲ ರವರು ಭಾಗವಹಿಸಿ, ಕನ್ನಡದ ಗೌರವ, ಸಂಸ್ಕೃತಿ ಮತ್ತು ಏಕತೆಯ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ AVSS ಸುಳ್ಯ ಶಾಖೆಯ ಸೇವಾ ಪ್ರತಿನಿಧಿಗಳು ಹಾಗೂ ಸಂಸ್ಥೆಗೆ ಸಹಕರಿಸುವ ಭೀಮಾ ಬಂಧುಗಳು ಭಾಗವಹಿಸಿ ರಾಜ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು.

ಧನ್ಯವಾದ ಸಮರ್ಪಣೆಯನ್ನು ಹರಿಣಾಕ್ಷಿ ಮೇಡಂ ರವರು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ್ ಪಿ.ಎಸ್. ಪಾತೆಟ್ಟಿ  ನೆರವೇರಿಸಿದರು.

Related Posts