Featured, ಅಂಕಣ, ಇತರೆ, ಸ್ಥಳೀಯ

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಮೊದಲ ಸಭೆ

ನಾಪೋಕ್ಲು: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಮೊದಲ ಸಭೆಯು ನವೆಂಬರ್ 15, 2025 ರಂದು ಶನಿವಾರ ನಾಪೋಕ್ಲು ವೀಕ್ಷಣಾ ಮಂದಿರದಲ್ಲಿ ಸಮಿತಿಯ ಅಧ್ಯಕ್ಷ ಮನು ಪೆರುಮುಂಡ ರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಸಭೆಯಲ್ಲಿ ಕೊಡಗು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಪ್ರಚಾರ ಸಮಿತಿ ಸದಸ್ಯರಾದ ಸದಾನಂದ ಬಂಗೇರ, ಜುಬೇರ, ಬ್ಲಾಕ್ ಕಾರ್ಯದರ್ಶಿ ಬಶೀರ್ ಚೇರಂಬಾಣೆ, ಬ್ಲಾಕ್ ಪ್ರಚಾರ ಸಮಿತಿಯ ಉಪಾಧ್ಯಕ್ಷರು ಕೌಶಿಕ್ ಕುಟ್ಟಯ್ಯ ಬಿ, ಅಹಮದ್ ಸಿ.ಹೆಚ್., ಸಂಯೋಜಕರು ಗೌರೀಶ್ ರೈ ಬಿ.ಎಸ್., ಪ್ರವೀಣ್ ಬೆಟ್ಟಗೇರಿ, ಪಿಯುಸ್ ಪೆರೇರ, ಸಹ ಸಂಯೋಜಕರು ಶಾಹಿದ್ ಬೆಟ್ಟಗೇರಿ, ಮಿಥುನ್ ಮಾಚಯ್ಯ ಬಲ್ಲಮಾವಟಿ, ಪ್ರಕಾಶ್ ಕಾರ್ಯಪ್ಪ ಕರಡ, ಹನೀಫ್ ಪಡಿಯಾನಿ ಹಾಗೂ ಸಮಿತಿ ಸದಸ್ಯರಾದ ಶೇಖರ ಉಡೋಳಿ, ಸಿ.ಎ. ಮೊಣ್ಣಪ್ಪ (ಹರೀಶ್), ರಶೀದ್ ಬಾಲೆಂಬಿ, ಗಣೇಶ್ ಬೆಳ್ಳಿಪಾಡಿ, ಸಾಕಿಬ್ ಎಂ.ಎ. ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸಭೆಯಲ್ಲಿ ವಲಯ ಮಟ್ಟದಲ್ಲಿ ಹೊಸ ಪದಾಧಿಕಾರಿಗಳನ್ನು ಅಂತಿಮಗೊಳಿಸುವುದು ಹಾಗೂ ಪ್ರತಿ ಬೂತ್‌ನಿಂದ ಇಬ್ಬರು ಡಿಜಿಟಲ್ ಯುವಕರನ್ನು ಪ್ರಚಾರ ಸಮಿತಿಗೆ ಆಯ್ಕೆ ಮಾಡುವ ಜವಾಬ್ದಾರಿಯನ್ನು ಸದಸ್ಯರಿಗೆ ವಹಿಸಲಾಯಿತು. ವಲಯ ಮಟ್ಟದ ಸಮಿತಿಗಳನ್ನು ರಚಿಸುವಾಗ ವಲಯ ಅಧ್ಯಕ್ಷರೊಂದಿಗೆ ಸಮನ್ವಯ ಸಾಧಿಸಿ ಸಮಿತಿಯನ್ನು ರಚಿಸುವಂತೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಸೂಚನೆ ನೀಡಿದರು.

ಸಭೆಯ ಅಂತ್ಯದಲ್ಲಿ ಮುಂದಿನ ಪ್ರಚಾರ ಚಟುವಟಿಕೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

m

Related Posts