Featured, ಇತರೆ, ಸ್ಥಳೀಯ

“ಜಟ್ಟಿಪಳ್ಳದಲ್ಲಿನ ಹೊಸ ಡಾಮರು ರಸ್ತೆಯನ್ನು ಮತ್ತೊಮ್ಮೆ ಅಗೆಯಲು ಬಂದ KUWS–AMRUT 2.0 ಗುತ್ತಿಗೆದಾರರ ಕಾರ್ಯಕ್ಕೆ ಜಟ್ಟಿಪಳ್ಳದಲ್ಲಿ ಸಾರ್ವಜನಿಕರ ತೀವ್ರ ಆಕ್ಷೇಪ”

ಮಂಚೆ ಅಗೆಯಲಾದ ರಸ್ತೆಯ ಹೊಂಡಗಳನ್ನು 15 ದಿನಗಳಲ್ಲಿ ಕಾಂಕ್ರೀಟ್ ಮಾಡಿ ಮುಚ್ಚುವ ಭರವಸೆ ನೀಡಿದ ಅಧಿಕಾರಿಗಳು

ಜಟ್ಟಿಪಳ್ಳ, ನ.15. ಶನಿವಾರ : ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಡಾಮರು ರಸ್ತೆಯನ್ನು ಮತ್ತೊಮ್ಮೆ ಅಗೆಯಲು KUWS (Amruth 2.0) ಯೋಜನೆಯ ಗುತ್ತಿಗೆದಾರರು ಗುರುವಾರ ಸಂಜೆ ಸ್ಥಳಕ್ಕೆ ಆಗಮಿಸಿದ ವೇಳೆ, ಜಟ್ಟಿಪಳ್ಳ ಪ್ರದೇಶದ ಸ್ಥಳೀಯರು ಅವರ ಕಾರ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈಗಾಗಲೇ ಅಗೆಯಲು ಮಂಚೆ ಮಾಡಿ ಬಿಟ್ಟಿರುವ ರಸ್ತೆಯ ಹೊಂಡಗಳನ್ನು ಕ್ರಮಬದ್ಧವಾಗಿ ಮುಚ್ಚದೇ, ಮತ್ತೆ ಹೊಸ ಹೊಂಡಗಳನ್ನು ತೆಗೆಯುವುದು ಸರಿಯಲ್ಲ. ಈಗಿರುವ ಹೊಂಡಗಳನ್ನು ಸರಿಯಾಗಿ ಕಾಂಕ್ರೀಟ್ ಮಾಡಿ ಮುಚ್ಚಿದ ನಂತರವೇ ಹೊಸ ಅಗೆಯುವ ಕೆಲಸಕ್ಕೆ ಮುಂದಾಗಬೇಕು,” ಎಂದು ಸ್ಪಷ್ಟ ಶರತ್ತು ಮಂಡಿಸಿದರು.

ಆಕ್ಷೇಪ ಗಾರರು ಕೂಡಲೇ ಮೇಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿದರು. ಘಟನೆ ಕುರಿತು ಮಾಹಿತಿ ದೊರಕಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ, ಈಗಾಗಲೇ ಆಗಿದ್ದ ರಸ್ತೆ ಅಗೆಯುವಿಕೆ ಮತ್ತು ಅದರಿಂದ ಉಂಟಾದ ಹೊಂಡಗಳನ್ನು ಪರಿಶೀಲಿಸಿದರು.

ಸ್ಥಿತಿಗತಿಯನ್ನು ಅವಲೋಕಿಸಿದ ಅಧಿಕಾರಿಗಳು ಕಸಬ ಗ್ರಾಮಸ್ಥರೊಂದಿಗೆ ಮಾತನಾಡುತ್ತಾ,
“ಈ ರಸ್ತೆ ಮೊದಲು ಅಗೆಯಲ್ಪಟ್ಟು ಹಾಗೆ ಬಿಟ್ಟಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇದು ನಮ್ಮ ದೋಷವಾಗಿದೆ. ಈಗಿದ್ದ ಹೊಂಡಗಳನ್ನು ಕಾಂಕ್ರೀಟ್ ಹಾಕಿ ಕ್ರಮಬದ್ಧವಾಗಿ ಮುಚ್ಚುತ್ತೇವೆ. ಇದಕ್ಕಾಗಿ 15 ದಿನಗಳ ಕಾಲಾವಕಾಶ ನೀಡಿ,” ಎಂದು ಭರವಸೆ ನೀಡಿದರು.

ಈ ಭರವಸೆಯನ್ನು ಗ್ರಾಮಸ್ಥರು ಒಪ್ಪಿಕೊಂಡು, “ಈಗಿರುವ ಮಂಚೆ ಅಗೆಯಲಾದ ರಸ್ತೆ ಹೊಂಡಗಳನ್ನು ಮುಚ್ಚಿದ ನಂತರವೇ ಮುಂದಿನ ಕೆಲಸ ಕೈಗೆತ್ತಿಕೊಳ್ಳಬೇಕು. ಮತ್ತೊಮ್ಮೆ ರಸ್ತೆ ಅಗೆಯುವ ಅನಿವಾರ್ಯತೆ ಬಂದಲ್ಲಿ, ಕೆಲಸ ಮುಗಿದ ಕೂಡಲೇ ಅದನ್ನು ಕಾಂಕ್ರೀಟ್ ಮಾಡಿ ಕ್ರಮಬದ್ಧವಾಗಿ ಮುಚ್ಚಬೇಕು,” ಎಂಬ ಬೇಡಿಕೆ ಇಟ್ಟರು. ಅಧಿಕಾರಿಗಳು ಅದಕ್ಕೆ ಒಪ್ಪಿಗೆ ನೀಡಿ ಈ ಮಂಚೆ ಅಗೆದ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಿದ ನಂತರ ಇಲ್ಲಿ ನಮ್ಮ ಕೆಲಸ ಮುಂದುವರಿಸುತ್ತೆವೆ ಎಂದು ಆಶ್ವಾಸನೆ ನೀಡಿದರು, ಈ ಸಂದರ್ಭದಲ್ಲಿ ರಶೀದ್ ಜಟ್ಟಿಪಳ್ಳ, ಶೀಹಾಬ್ ಶಾ, ರಝಾಕ್ ಕೆ ಯಮ್, ಮೊಹೀದ್ದೀನ್ ಅಜ್ಮೀರಿಯ, ತಾಜ್ಜುದೀನ್ ಎಮ್ ಎಸ್,ಬಶೀರ್ ಕ್ವಾಲಿಟಿ, ಮೊದಲಾದವರು ಉಪಸ್ಥಿತರಿದ್ದರು

 

Related Posts