Featured, ಇತರೆ, ಸ್ಥಳೀಯ

ಜಯನಗರ ಹದಗೆಟ್ಟಿರುವ ಸಾರ್ವಜನಿಕ ರಸ್ತೆ : ಸ್ಥಳೀಯ ಪತ್ರಕರ್ತರಿಂದ ರಸ್ತೆ ದುರಸ್ಥಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ

ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು, ರೋಗಿಗಳು ಹಾಗೂ ವಾಹನ ಚಾಲಕರು ದಿನನಿತ್ಯ ದೊಡ್ಡ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಪತ್ರಿಕಾ ವರದಿಗಳಿಗೆ ಸ್ಪಂದಿಸದಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಪತ್ರಕರ್ತರು ಸ್ವತಃ ಮುಂದಾಗಿದ್ದು, ರಸ್ತೆ ತಕ್ಷಣ ದುರಸ್ತಿ ಮಾಡುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಜಯನಗರ: ಹಲವು ತಿಂಗಳಿನಿಂದ ಹದಗೆಟ್ಟಿರುವ ಸಾರ್ವಜನಿಕ ರಸ್ತೆ ಸ್ಥಳೀಯರಿಗೆ ಮಾತ್ರವಲ್ಲ, ರೋಗಿಗಳು ಹಾಗೂ ವಾಹನ ಚಾಲಕರಿಗೂ ದೊಡ್ಡ ತೊಂದರೆಯಾಗಿದೆ. ರಸ್ತೆ ಕುಳಿ–ಕುಣಿಗಳಿಂದ ತುಂಬಿ ಸಂಚಾರಕ್ಕೆ ಗಂಭೀರ ಅಡ್ಡಿ ಉಂಟಾಗುತ್ತಿರುವ ಕುರಿತು ಹಲವು ಬಾರಿ ಮಾಧ್ಯಮಗಳು ವರದಿ ಮಾಡಿದ್ದರೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ  ಸಮಸ್ಯೆಯ ಗಂಭೀರತೆಯನ್ನು ಅರಿತರು ಪ್ರತಿಕ್ರಿಯೆ ಬರದಿರುವುದರಿಂದ ಬೇಸತ್ತ ಸ್ಥಳೀಯ ಪತ್ರಕರ್ತರು ಸ್ವತಃ ಮುಂದಾಗಿದ್ದು, ರಸ್ತೆ ತಕ್ಷಣ ದುರಸ್ತಿ ಮಾಡುವಂತೆ ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ನಾಳೆ ಬೆಳಿಗ್ಗೆ ಜಯನಗರ ವಿಕ್ರಮ ಯುವಕ ಮಂಡಲದ ಬಳಿ ಪ್ರತಿಭಟನೆ ಜರುಗಲಿದೆ, ಸ್ಥಳೀಯರು ಕೂಡ ಪತ್ರಕರ್ತರ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ರಸ್ತೆ ದುರಸ್ತಿ ಕಾರ್ಯ ತಕ್ಷಣ ಪ್ರಾರಂಭವಾಗಬೇಕು ಎಂದು ಆಗ್ರಹಿಸಿದ್ದಾರೆ. 

Related Posts