Featured, ಇತರೆ, ಸ್ಥಳೀಯ

ಅಂತರ್‌ಧರ್ಮ ವಿವಾಹಕ್ಕೆ ಎರಡು ಮಾನದಂಡವೇ? – ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ.ಎಸ್. ಪ್ರಶ್ನೆ

ಪ್ರೀತಿಸಿ ವಿವಾಹವಾಗುವುದು ಸಂವಿಧಾನಾತ್ಮಕ ಹಕ್ಕು; ಮುಸ್ಲಿಂ ಯುವತಿ–ಹಿಂದೂ ಯುವಕ ಮದುವೆಗೆ ಮೌನ, ಆದರೆ ಹಿಂದೂ ಯುವತಿ–ಮುಸ್ಲಿಂ ಯುವಕ ವಿವಾಹಕ್ಕೆ ವಿರೋಧದ ತಾರತಮ್ಯ ಏಕೆ?

ರಾಜ್ಯದಲ್ಲಿ ನಡೆಯುತ್ತಿರುವ ಅಂತರ್‌ಧರ್ಮ ವಿವಾಹಗಳನ್ನು ಏಕಪಕ್ಷೀಯವಾಗಿ ‘ಲವ್ ಜಿಹಾದ್’ ಮತಾಂತರ, ಎಂದು ಟೀಕಿಸುವವರನ್ನು ಪ್ರಶ್ನಿಸಿದ ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಉಮ್ಮರ್, ಅದೇ ರೀತಿಯ ವಿವಾಹಗಳು ಇತರ ಸಮುದಾಯಗಳಲ್ಲಿ ನಡೆದಾಗ ಅದಕ್ಕೆ ಯಾವ ಹೆಸರು ಕೊಡಲಾಗುತ್ತದೆ ಎಂದು ತೀವ್ರವಾಗಿ ಪ್ರಶ್ನಿಸಿದರು. ಸಮಾಜದಲ್ಲಿ ತಾರತಮ್ಯಪೂರಿತ ನಿಲುವುಗಳು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ

ಒಂದು ವಾರದ ಹಿಂದೆ ಸುಳ್ಯಕ್ಕೆ ವರ್ಗಾವಣೆ ಆಗಿ ಬಂದು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಸ್ಲಿಂ ಸಮುದಾಯದ ಯುವತಿ, ಅದೇ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ಮೂಲದ ಹಿಂದೂ ಯುವಕ ಪರಸ್ಪರ ಪ್ರೀತಿಸಿ, ಯುವತಿಯ ಹೆಸರನ್ನು ಬದಲಾಯಿಸಿ 23/11/2025 ರಂದು ಹಿಂದೂ ಸಂಪ್ರದಾಯ ಪ್ರಕಾರ ವಿವಾಹ ಆಗಿದ್ದಾರೆ. ಪ್ರಾಯಕ್ಕೆ ಬಂದ ಯುವಕ ಯುವತಿಯರು ಪರಸ್ಪರ ಪ್ರೀತಿಸಿ ವಿವಾಹ ಆಗುವುದು ಅವರವರ ಸಂವಿಧಾನಾತ್ಮಕ ಹಕ್ಕು.ಈ ವಿಚಾರವನ್ನು ನಾವು ಗೌರವಿಸುತ್ತೆವೆ ಆದರೆ ಪ್ರಸ್ತುತ ಸನ್ನಿವೇಶದಲ್ಲಿ  ಹುಡುಗ ಮುಸ್ಲಿಮನಾಗಿದ್ದು ಹುಡುಗಿ ಹಿಂದೂ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ? ರಾಜ್ಯದಲ್ಲಿ ಕಂಡುಬಂದ ಹಲವು ಆಂತರ್ ಧರ್ಮ” ವಿವಾಹಕ್ಕೆ ಒಂದು ಸಮುದಾಯವನ್ನು ಗುರಿಯಾಗಿಸಿ ಲವ್ ಜಿಹಾದ್, ಇಸ್ಲಾಮೀಕರಣ, ಮತಾಂತರ ಎಂದೆಲ್ಲ ಇಲ್ಲಸಲ್ಲದ ಮಾತುಗಳನ್ನು ಹೇಳಿ ಲಾಭ ಪಡೆಯುವರು ಈಗ ನಡೆದಿರುವ ಈ ಮದುವೆಗೆ ಏನೆಂದು ಹೆಸರಿಡುತ್ತಾರೆ ? ಎಂದು ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ ಎಸ್ ಪ್ರಶ್ನಿಸಿದ್ದಾರೆ,ಅಂತರ್ ಧರ್ಮ ವಿವಾಹ‌ ಆಗುವವರಿಗೆ ಇಬ್ಬಾಗದ ಮಾನದಂಡ ಏಕೆ ? ಮುಸ್ಲಿಂ ಯುವಕ ಮತ್ತು ಇತರ ಸಮುದಾಯದ ಯುವತಿ ಪರಸ್ಪರ ಪ್ರೀತಿಸಿ ವಿವಾಹವಾಗುವ ಸಮಯದಲ್ಲಿ, ಒಂದು ಸಮುದಾಯವನ್ನು ಗುರಿಯಾಗಿಸಿ ಪ್ರತಿಭಟನೆಗಳು, ಮಾಧ್ಯಮ ಸಂವಾದಗಳು, ಮಾಧ್ಯಮಗಳ ತಾರತಮ್ಯ ನೀತಿಗಳು ಪ್ರವೃತ್ತಿ ಯಾಗುತ್ತಿದ್ದು ಇದು ಸಂವಿಧಾನ ವಿರೋಧಿ ಆಗುವುದಿಲ್ಲವೇ? ಧಾರ್ಮಿಕ ಭಿನ್ನತೆಗಳನ್ನು ಆಧರಿಸಿ ಪ್ರೀತಿಯ ಬಂಧನಕ್ಕೆ ದುರುಪಯೋಗಿ ಅರ್ಥ ನೀಡುವುದು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುತ್ತದೆ. ಪರಸ್ಪರ ಗೌರವ ಮತ್ತು ಸಂವಿಧಾನಾತ್ಮಕ ಸ್ವಾತಂತ್ರ್ಯವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ, ತಾರತಮ್ಯ ರೀತಿ, ನೀತಿಗಳು ಸಂವಿಧಾನ ವಿರೋಧಿ ಆಗುವುದಿಲ್ಲವೇ? ಇದನ್ನು ಎಲ್ಲರು ವಿರೋದಿಸಬೇಕೆಂದರು

Related Posts