ಪ್ರಥಮ, ಎಂ.ಜೆ.ಎಂ ಕಲ್ಲುಗುಂಡಿ ದ್ವಿತೀಯ ಹಿದಾಯತುಲ್ ಇಸ್ಲಾಂ ಮದ್ರಸ ಚಾಪಳ್ಳ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಸುಳ್ಯ ಮತ್ತು ಕಡಬ ತಾಲೂಕು ಮಟ್ಟದ ದಫ್ ಸ್ಪರ್ಧೆಯು ಬುಧವಾರ ಸಂಜೆ ಮೊಹಿಯುದ್ದೀನ್ ಜುಮಾ ಮಸೀದಿ ಅತ್ತಿಕರಮಜಲ್, ಬಾಳಿಲದ ಮಸೀದಿ ವಠಾರದಲ್ಲಿ ನಡೆಯಿತು.ಜಮಾಅತ್ ಖತೀಬರಾದ ಬಹು ಯಾಸಿರ್ ಅರಾಫಾತ್ ಕೌಸರಿ ಉಸ್ತಾದರು ದುವಾ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಹಾಜಿ ಅಬೂಬಕ್ಕರ್ ಮಂಗಳ, ಅಬ್ದುಲ್ ಗಫೂರ್ ಕಲ್ಮಡ್ಕ, ಮಮ್ಮಾಲಿ ಹಾಜಿ ಬೆಳ್ಳಾರೆ, ಆರಿಫ್ ಇಂಜಿನಿಯರ್ ಬೆಳ್ಳಾರೆ, ಇಬ್ರಾಹಿಂ ಅತ್ತಿಕರಮಜಲ್, ನಾಸಿರ್ ಆರಂಡ, ಸುಲೈಮಾನ್ ಹಾಜಿ ಇಂದ್ರಾಜೆ, ಯಾಹ್ಯಾ ಬೆಳ್ಳಾರೆ, ನವಜ್ ಬ್ರದರ್ಸ್ ನಿಂತಿಕಲ್ಲು,ಕಲಾಂ ಸುಳ್ಯ,ರಜಾಕ್ ಅತ್ತಿಕರಮಜಲ್, ಅಶ್ರಫ್ ಅಗಲ್ಪಾಡಿ, ಶರೀಫ್ ಫ್ರಂಟ್ ಲೈನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜನಾಬ್ ಉಮರ್ ಯು.ಎಚ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಮಾಅತ್ ಖತೀಬರಾದ ಬಹು ಯಾಸಿರ್ ಅರಾಫತ್ ಕೌಸರಿ ಶುಭಾಶಂಸಗೈದರು.ಅಕಾಡೆಮಿ ಸದಸ್ಯರಾದ ಅನ್ಸಾರ್ ಕಾಟಿಪಳ್ಳ, ಮಾಜಿ ಸದಸ್ಯರಾದ ಅನ್ಸಾರ್ ಬೆಳ್ಳಾರೆ,ಸಮದ್ ಸೋಂಪಾಡಿ, ಆಶಿಕ್ ಮಂಗಳ, ನಝೀರ್ ಮಂಗಳೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಹಾಜಿ ಶರೀಫ್ ಭಾರತ್ ಬಾಳಿಲ ಪ್ರಾಸ್ತಾವಿಕದ ಜೊತೆಗೆ ಅತಿಥಿಗಳನ್ನು ಸ್ವಾಗತಿಸಿದರು.
ದಫ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಎಂ.ಜೆ.ಎಂ ಕಲ್ಲುಗುಂಡಿ ಹಾಗೂ ದ್ವಿತೀಯ ಸ್ಥಾನ ಹಿದಾಯತುಲ್ ಇಸ್ಲಾಂ ಮದ್ರಸ ಚಾಪಳ್ಳ ತಂಡವು ಬಹುಮಾನಗಳಿಸಿ ಶನಿವಾರದಂದು ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟುವಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

