Featured, ಇತರೆ, ಸ್ಥಳೀಯ

ಸುಳ್ಯ : ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಸಂಯುಕ್ತ ಯೋಜನೆಯ ಬೃಹತ್ ಇಫ್ತಾರ್ ಕೂಟಕ್ಕೆ ಚಾಲನೆ

ಸುಳ್ಯ: ಗಾಂಧಿನಗರ, ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ (ರಿ) ಗಾಂಧಿನಗರ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ಗಾಂಧಿನಗರ ಸುಳ್ಯ ಇದರ ಸಹಯೋಗದಲ್ಲಿ, ದಾನಿಗಳ ಸಹಕಾರದೊಂದಿಗೆ ಪರಂಪರೆಯಿಂದ ನಡೆದುಕೊಂಡು ಬರುತ್ತಿರುವ ಪವಿತ್ರ ರಂಝಾನ್ ತಿಂಗಳ ಬೃಹತ್ “ಇಫ್ತಾರ್ ಕೂಟ”ದ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 19ರಂದು, ರಂಝಾನ್ ತಿಂಗಳ ಮೊದಲ ದಿನ, ಮುನವ್ವಿರುಲ್ ಇಸ್ಲಾಂ ಮದರಸ ವಠಾರದಲ್ಲಿ ನೆರವೇರಿತು.

ಅಧ್ಯಕ್ಷತೆಯನ್ನು ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಹಾಜಿ ಮಹಮ್ಮದ್ KMS ವಹಿಸಿದ್ದರು. ಅನ್ಸಾರ್ ಕಮಿಟಿಯ ಅಧ್ಯಕ್ಷರಾದ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ ಸೇರಿದಂತೆ ಎರಡೂ ಸಮಿತಿಗಳ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಬಹು। ಅಶ್ರಫ್ ಖಾಮಿಲ್ ಸಖಾಫಿ ಉಸ್ತಾದ್ ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಅವರು ಪವಿತ್ರ ರಂಝಾನ್ ಮಾಸದ ಆತ್ಮೀಯ ಮಹತ್ವವನ್ನು ವಿವರಿಸಿ, ಈ ತಿಂಗಳು ಆತ್ಮಶುದ್ಧಿ, ತ್ಯಾಗ, ಸಹನಶೀಲತೆ ಮತ್ತು ಸಹೋದರತ್ವವನ್ನು ಬೆಳಸುವ ಮಹತ್ತರ ಸಮಯವಾಗಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಜ। ಟಿ.ಎಂ. ಶಹೀದ್ ಉಪಸ್ಥಿತರಿದ್ದು, ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿ ರಂಝಾನ್ ಶುಭಾಶಯಗಳನ್ನು ಕೋರಿದರು. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರವು ಹೆಚ್ಚಳವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಜ। ಟಿ.ಎಂ. ಶಹೀದ್ ಉಪಸ್ಥಿತರಿದ್ದು, ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿ ರಂಝಾನ್ ಶುಭಾಶಯಗಳನ್ನು ಕೋರಿದರು. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಪರಸ್ಪರ ಸಹಕಾರವು ಹೆಚ್ಚಳವಾಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್  ಮಾಜಿ ಅಧ್ಯಕ್ಷ ಜ। ಎಸ್. ಸಂಶುದ್ದೀನ್, ಕೆಪೆಕ್ ಮಾಜಿ ನಿರ್ದೇಶಕರಾದ ಜ। ಪಿ.ಎ. ಮಹಮ್ಮದ್, ನಗರ ಪಂಚಾಯತ್ ಮಾಜಿ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಯಾಕೂಬ್, ಹನೀಫ್ ಬುಶ್ರಾ, ಇಬ್ರಾಹಿಮ್ ಕೆ ಬಿ ಉಪಸ್ಥಿತರಿದ್ದರು

ಸುಮಾರು 500ಕ್ಕೂ ಅಧಿಕ ಉಪವಾಸಿಗರು ಇಫ್ತಾರ್ ಕೂಟದಲ್ಲಿ ಭಾಗವಹಿಸಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಮಾಅತ್ ಉಪಾಧ್ಯಕ್ಷರಾದ ಜ। ಅಬ್ದುಲ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿದರು. ನಗರ ಪಂಚಾಯತ್ ಮಾಜಿ ಸದಸ್ಯರಾದ ಜ। ಉಮ್ಮರ್ ಕೆ.ಎಸ್. ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಇಫ್ತಾರ್ ಕೂಟದ ಉಸ್ತುವಾರಿಯನ್ನು ಜುನೈದ್ ಎನ್.ಎ., ಶಹೀದ್ ಪಾರೆ, ಕಾರ್ಯದರ್ಶಿ ಹನೀಫ್ ಬಿ.ಎಂ., ಉಪಾಧ್ಯಕ್ಷರಾದ ಕೆ.ಬಿ. ಇಬ್ರಾಹಿಂ, ಹನೀಫ್ ಬುಶ್ರಾ, ಪತ್ತುಚ್ಚ ಕರಾವಳಿ, ಅಬ್ದುಲ್ ಗಫಾರ್ ನಾವೂರು, ಅಬ್ದುಲ್ ಶುಕೂರ್ ಕೆ.ಹೆಚ್., ಜಮಾಅತ್ ಖಜಾಂಚಿ ಎಸ್.ಎಂ. ಅಬ್ದುಲ್ ಹಮೀದ್ ನಾವೂರು, ಅಬ್ದುಲ್ ಖಾದರ್ ಎಂ.ಟಿ., ಅಬೂಬಕ್ಕರ್ ಎಸ್.ಪಿ., ಅಬ್ದುಲ್ ಖಾದರ್ ಪಾರೆ, ಯಾಕೂಬ್ ಎಸ್.ಟಿ., ಸಿದ್ದೀಕ್ ಕಟ್ಟೆಕ್ಕಾರ್, ನಗರ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ ಸೇರಿದಂತೆ ಹಲವರು ಸಹಕರಿಸಿದರು. ಪವಿತ್ರ ರಂಝಾನ್ ತಿಂಗಳ ಪ್ರಥಮ ದಿನವೇ ನಡೆದ ಈ ಬೃಹತ್ ಇಫ್ತಾರ್ ಕೂಟವು ಸಹೋದರತ್ವ, ಭಕ್ತಿ ಹಾಗೂ ಸೇವಾ ಮನೋಭಾವದ ಸಂಕೇತವಾಗಿ ಕಂಗೊಳಿಸಿತು.

Related Posts