Featured, ಆರೋಗ್ಯ, ಸ್ಥಳೀಯ

ಇಸ್ತ್ರಿ ಸುಟ್ಟ ಗುರುತು ಡಿಸೈನ್ ಶರ್ಟ್‌ಗೆ ಲಕ್ಷಾಂತರ ಬೆಲೆ: ಫ್ಯಾಷನ್ ಲೋಕದಲ್ಲಿ ಚರ್ಚೆ !!!

ಸಾಮಾನ್ಯ ಕಲೆ, ಅಸಾಮಾನ್ಯ ಬೆಲೆ: ಡಿಸೈನರ್ ಶರ್ಟ್‌ಗೆ ಭಾರೀ ಚರ್ಚೆ ಬರ್ನ್ ಗ್ರಾಫಿಕ್’ ಶರ್ಟ್ ವೈರಲ್ – ಬೆಲೆ ನೋಡಿ ನೆಟ್ಟಿಗರು ದಂಗ್!

ಅಂತರರಾಷ್ಟ್ರೀಯ ಫ್ಯಾಷನ್ ಬ್ರ್ಯಾಂಡ್ ವೆಟ್ಮೆಂಟ್ಸ್ (Vetements) ತನ್ನ ವಿಶಿಷ್ಟ ವಿನ್ಯಾಸಗಳ ಮೂಲಕ ಮತ್ತೆ ಸುದ್ದಿಯಲ್ಲಿದೆ. ಕಂಪನಿಯ ವೈಟ್ ಐರನಿಂಗ್ ಬರ್ನ್ ಗ್ರಾಫಿಕ್ ಶರ್ಟ್
(White Ironing Burn Graphic Shirt) ಎಂಬ ಹೆಸರಿನ ಶರ್ಟ್‌ ಒಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಶರ್ಟ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯವಾಗಿ ಇಸ್ತ್ರಿ ಸುಟ್ಟ ಗುರುತು ಕಂಡುಬರುವಂತೆ ವಿನ್ಯಾಸಗೊಳಿಸಲಾಗಿದೆ. ಶರ್ಟ್‌ನ ಮೇಲ್ಭಾಗದಲ್ಲಿ ಸುಟ್ಟ ಕಲೆ ಇರುವಂತೆ ಗ್ರಾಫಿಕ್ ಡಿಸೈನ್ ನೀಡಲಾಗಿದ್ದು, ಅದನ್ನೇ ಆಕರ್ಷಕ ವಿನ್ಯಾಸವಾಗಿ ಮಾರುಕಟ್ಟೆಗೆ ತಂದಿದ್ದಾರೆ.

ಈ ಶರ್ಟ್‌ನ ಬೆಲೆ $1,139 (ಅಂದಾಜು ಲಕ್ಷಕ್ಕೂ ಹೆಚ್ಚು ಭಾರತೀಯ ರೂಪಾಯಿ) ಆಗಿದ್ದು, ಸಾಮಾನ್ಯ ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ವಿನ್ಯಾಸವನ್ನು ಸೃಜನಾತ್ಮಕ ಪ್ರಯೋಗವೆಂದು ಕೊಂಡಾಡಿದರೆ, ಇನ್ನೂ ಕೆಲವರು ಇದರ ಬೆಲೆಯನ್ನು ಪ್ರಶ್ನಿಸಿದ್ದಾರೆ.
ಫ್ಯಾಷನ್ ತಜ್ಞರ ಪ್ರಕಾರ, ಇಂತಹ ವಿಶಿಷ್ಟ ಮತ್ತು ವಿವಾದಾತ್ಮಕ ವಿನ್ಯಾಸಗಳ ಮೂಲಕ ಬ್ರ್ಯಾಂಡ್‌ಗಳು ಗಮನ ಸೆಳೆಯಲು ಪ್ರಯತ್ನಿಸುತ್ತವೆ. “ಸಾಮಾನ್ಯತೆಯನ್ನೇ ಅಸಾಮಾನ್ಯವಾಗಿ ತೋರಿಸುವುದು” ಇಂದಿನ ಫ್ಯಾಷನ್ ಲೋಕದ ಪ್ರಮುಖ ಧೋರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಸುಟ್ಟ ಗುರುತು ಹೊಂದಿದಂತೆ ಕಾಣುವ ಈ ಲಕ್ಸುರಿ ಶರ್ಟ್ ಇದೀಗ ಫ್ಯಾಷನ್ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.

 

Related Posts