ಕತಾರ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ, ರಾಜಧಾನಿ ದೊಹಾ ಆಕಾಶದಲ್ಲಿ ಹಲವಾರು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂಬ ವರದಿಗಳು ಲಭ್ಯವಾಗಿವೆ.
ಇದರಿಂದಾಗಿ, ದೇಶದ ಹೋಟೆಲ್‌ಗಳು ಹಾಗೂ ಪ್ರವಾಸೋದ್ಯಮ ತಾಣಗಳಲ್ಲಿ ನಡೆಯುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಮರ ಪವಿತ್ರ ತಿಂಗಳು ರಂಝಾನ್ ಹಿನ್ನೆಲೆ ಸಾಮಾನ್ಯವಾಗಿ ಹೋಟೆಲ್‌ಗಳು ಮತ್ತು ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುವ ರಂಜಾನ್ ಟೆಂಟ್‌ಗಳು, ಇಫ್ತಾರ್ ಕೂಟಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಭದ್ರತಾ ಕಾರಣಗಳಿಂದ ತೆಗೆದುಕೊಳ್ಳಲಾದ ಈ ಕ್ರಮಗಳು ಮುಂದಿನ ಸೂಚನೆ ಸಿಗುವವರೆಗೆ ಜಾರಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ


