ಅಬುಧಾಬಿ ಮೂಲದ ವಿಮಾನಯಾನ ಸಂಸ್ಥೆಯಾದ ಎತಿಹಾದ್ ಏರ್ವೇಸ್ (Etihad Airways) (ಮಾರ್ಚ್ 6) ಇಂದಿನಿಂದ ಸೀಮಿತ ಪ್ರಮಾಣದಲ್ಲಿ ವಾಣಿಜ್ಯ ವಿಮಾನ ಸೇವೆಗಳನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ. ಇಂದಿನಿಂದ (ಮಾರ್ಚ್ 6ರಿಂದ 19ರವರೆಗೆ) ಆಯ್ದ ಪ್ರಮುಖ ಅಂತರರಾಷ್ಟ್ರೀಯ ತಾಣಗಳಿಗೆ ಮಾತ್ರ ವಿಮಾನಗಳನ್ನು ನಡೆಸಲಾಗುವುದು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಅವಧಿಯಲ್ಲಿ ಅಬುಧಾಬಿ (Abu Dhabi)ಯಿಂದ ಕೆಳಗಿನ ಪ್ರಮುಖ ನಗರಗಳಿಗೆ ವಿಮಾನ ಸೇವೆಗಳು ಲಭ್ಯವಾಗಲಿವೆ: ಕೈರೋ, ದೆಹಲಿ, ಲಂಡನ್, ಫ್ರಾಂಕ್ಫರ್ಟ್, ನ್ಯೂಯಾರ್ಕ್ ಸಿಟಿ, ಪ್ಯಾರಿಸ್, ಮಾಸ್ಕೋ, ಟೊರೊಂಟೊ ಮತ್ತು ಜ್ಯೂರಿಕ್
ಕಂಪನಿಯ ಪ್ರಕಾರ, ಪ್ರಯಾಣಿಕರ ಬೇಡಿಕೆ ಹಾಗೂ ಕಾರ್ಯಾಚರಣಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಮಾನಗಳನ್ನು ಸೀಮಿತ ಸಂಖ್ಯೆಯಲ್ಲಿ ನಡೆಸಲಾಗುತ್ತದೆ. ಅಗತ್ಯವಿದ್ದರೆ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನೂ ಮಾಡಬಹುದೆಂದು ತಿಳಿಸಲಾಗಿದೆ.
ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಾಗಿ ಎತಿಹಾದ್ ಏರ್ವೇಸ್ (Etihad Airways)ನ ಅಧಿಕೃತ ವೆಬ್ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸುವಂತೆ ಸಂಸ್ಥೆ ಮನವಿ ಮಾಡಿದೆ.


