Featured, ಇತರೆ, ಸ್ಥಳೀಯ

ಹೆಚ್.ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ನಿಯಮಗಳು ಜಾರಿ

ಗ್ರಾಹಕರು ತಮ್ಮ ಇಚ್ಛೆಯಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ..! ಕೊಲ್ಲಿ ಯುದ್ದ ಎಫೆಕ್ಟ್.!!???

ಸುಳ್ಯ: ಹೆಚ್.ಪಿ ಗ್ಯಾಸ್ ಬಳಕೆದಾರರಿಗೆ ಸಿಲಿಂಡರ್ ಬುಕ್ಕಿಂಗ್ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಗ್ರಾಹಕರು ತಮ್ಮ ಇಚ್ಛೆಯಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಗ್ರಾಹಕರ ಬಳಿ ಇರುವ ಸಿಲಿಂಡರ್‌ಗಳ ಸಂಖ್ಯೆಯನ್ನು ಆಧಾರವಾಗಿ ಪಡೆದು ಬುಕ್ಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ. ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರು ಸಿಲಿಂಡರ್ ವಿತರಣೆಗೊಂಡ ದಿನದಿಂದ 21 ದಿನಗಳ ನಂತರ ಮಾತ್ರ ಮುಂದಿನ ರೀಫಿಲ್ ಬುಕ್ ಮಾಡಲು ಅವಕಾಶವಿರುತ್ತದೆ. ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರು ಒಂದು ಸಿಲಿಂಡರ್ ಖಾಲಿಯಾದ ಬಳಿಕ ಕನಿಷ್ಠ 30 ದಿನಗಳ ಅಂತರದ ನಂತರ ಮಾತ್ರ ಮುಂದಿನ ಬುಕ್ಕಿಂಗ್ ಮಾಡಬೇಕಾಗಿದೆ.
ಇದರ ಜೊತೆಗೆ ಬಯೋಮೆಟ್ರಿಕ್ ಇ-ಕೆವೈಸಿ ಹಾಗೂ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಇರಾನ್ ಹಾಗೂ ಅಮೇರಿಕಾ–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆಗಳಲ್ಲಿ ಅನಿಲ ಪೂರೈಕೆಯಲ್ಲಿ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ತೆಕ್ಕಿಲ್ ಹೆಚ್.ಪಿ ಗ್ರಾಮೀಣ್ ಎಲ್‌ಪಿಜಿ ವಿತರಕ (ಅರಂತೋಡು) ಸಂಸ್ಥೆಯ ವ್ಯವಸ್ಥಾಪಕರಾದ ಧನುರಾಜ್ ಊರುಪಂಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Posts