ಸುಳ್ಯ: ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ವ್ಯಾಪಾರಿ, ಸುಳ್ಯ ಅನ್ಸಾರೀಯಾ ಯತೀಮ್ ಮತ್ತು ನಿರ್ಗತಿಕ ಕೇಂದ್ರದ ಮಾಜಿ ನಿರ್ದೇಶಕರಾಗಿದ್ದ ಸ್ನೇಹಜೀವಿ ಉಗ್ರಾಣಿ ಅಬ್ದುಲ್ಲಾ (80) ಅವರು ಮಾ.12 ರಂದು ಬೆಳಗಿನ ಜಾವ ನಿಧನರಾದರು.
ಕಳೆದ ಹಲವು ದಶಕಗಳಿಂದ ಸುಳ್ಯದ ಜನತಾ ಸ್ಟೋರ್ ಹಿಂಬಾಗದಲ್ಲಿ ಗೋಣಿ ಚೀಲ, ಡ್ರಮ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಸಾಮಗ್ರಿಗಳ ವ್ಯಾಪಾರ ನಡೆಸುತ್ತಿದ್ದರು. ಸುಳ್ಯದ ಹಳೆಯ ಕಾಲದ ಪ್ರಮುಖ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದ ಅವರು ಸಾರ್ವಜನಿಕರೊಂದಿಗೆ ಆತ್ಮೀಯ ಹಾಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು
ಮೃತರು ಪತ್ನಿ, ಪುತ್ರರಾದ ಸುಳ್ಯ ಗಾಂಧಿನಗರದಲ್ಲಿರುವ ಮೆಟ್ರೋ ಫರ್ನಿಚರ್ಸ್ ಮಾಲಕ ಅಶ್ರಫ್, ರಥಬೀದಿಯಲ್ಲಿರುವ ಬೇಬಿ ಶಾಪ್ ಮಾಲಕ ಸಿರಾಜುದ್ದೀನ್, ಉದ್ಯಮಿ ನೌಫಾಲ್ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಹಾಗೂ ಜನಾಝಾ ನಮಾಝ್ ಮಾ.12 ರಂದು ಮಧ್ಯಾಹ್ನ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

