Featured, ಸ್ಥಳೀಯ

ಸುಳ್ಯ ಶಾಸಕಿ ಭಾಗೀರಥಿಗೆ ಕಾರ್ಮಿಕರ ಮನವಿ: ಕಾರ್ಮಿಕ ವಿರೋಧಿ ಸಂಹಿತೆ ಜಾರಿಗೆ ವಿರೋಧ

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) CWFI ಸುಳ್ಯ ತಾಲೂಕು ಸಮಿತಿಯ ವತಿಯಿಂದ ಸುಳ್ಯದ ಶಾಸಕಿ ಭಾಗೀರಥಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಕಾರ್ಮಿಕ ವಿರೋಧಿ ಸಂಹಿತೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಲಾಯಿತು. ಜೊತೆಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗ ಮಾಡುವ ಪ್ರಸ್ತಾಪವನ್ನು ಕೈಬಿಡಬೇಕು ಹಾಗೂ ಈ ವಿಷಯವನ್ನು ಶಾಸನಸಭೆಯಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಮುಂದಾಳುಗಳಾದ ವಿಶ್ವನಾಥ ನೆಲ್ಲಿ ಬಂಗಾರಡ್ಕ, ಬಿಜು ಅಗಸ್ಟಿನ್, ಆನಂದ ಗೌಡ, ಗಣೇಶ, ವಿ. ಮೇದಪ್ಪ ಮತ್ತು ಅಬ್ಬುಬಕ್ಕರ್ ಜಟ್ಟಿಪಳ್ಳ ಅವರು ಉಪಸ್ಥಿತರಿದ್ದರು.

m

Related Posts