Featured, ಇತರೆ, ಸ್ಥಳೀಯ

ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ಹೊಸ ನಿಯಮಗಳು ಜಾರಿ; ಜನನ ದಿನಾಂಕಕ್ಕೆ ಆಧಾರ್ ಮಾನ್ಯವಲ್ಲ !

ಈ ಮೊದಲು ಪ್ಯಾನ್ ಕಾಡ್೯ ಗೆ ಜನನ ದಿನಾಂಕಕ್ಕೆ ಆದಾರ್ ಕಾರ್ಡ್ ಪುರಾವೆ ಯಾಗಿ ಮಾನ್ಯವಾಗುತ್ತಿತ್ತು ಇನ್ನೂ ಮುಂದಕ್ಕೆ ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಆಧಾರ್ (Aadhaar) ಅನ್ನು ಮಾನ್ಯ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ, ಮಾರ್ಚ್ 24: ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ (PAN Card) ಸಂಬಂಧಿತ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. 2026ರ ಏಪ್ರಿಲ್ 1ರಿಂದ ಈ ಹೊಸ ಮಾರ್ಗಸೂಚಿಗಳು ದೇಶದಾದ್ಯಂತ ಜಾರಿಗೆ ಬರಲಿದ್ದು, ಪ್ಯಾನ್ ಪಡೆಯುವ ಪ್ರಕ್ರಿಯೆಯಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಅರ್ಜಿದಾರರು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಗುರುತು ಹಾಗೂ ವಿಳಾಸದ ದೃಢೀಕರಣಕ್ಕಾಗಿ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ವಿಶೇಷವಾಗಿ ಜನನ ಪ್ರಮಾಣ ಪತ್ರ (Birth Certificate), ಮತದಾರ ಗುರುತಿನ ಚೀಟಿ (Voter ID), ಚಾಲನಾ ಪರವಾನಗಿ (Driving License) ಸೇರಿದಂತೆ ದಾಖಲೆಗಳಿಗೆ ಆದ್ಯತೆ ನೀಡಲಾಗಿದೆ. ಜೊತೆಗೆ, 10ನೇ ತರಗತಿ ಪ್ರಮಾಣ ಪತ್ರವನ್ನೂ ಸಹ ಪರಿಗಣಿಸಲಾಗುತ್ತದೆ.
ಮುಖ್ಯವಾಗಿ ಈ ಮೊದಲು ಪ್ಯಾನ್ ಕಾಡ್೯ ಗೆ ಜನನ ದಿನಾಂಕಕ್ಕೆ ಆದಾರ್ ಕಾರ್ಡ್ ಪುರಾವೆ ಯಾಗಿ ಮಾನ್ಯವಾಗುತ್ತಿತ್ತು. ಮುಂದಕ್ಕೆ ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಆಧಾರ್ (Aadhaar) ಅನ್ನು ಮಾನ್ಯ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ, ಅರ್ಜಿದಾರರು ತಮ್ಮ ಜನ್ಮ ದಿನಾಂಕವನ್ನು ದೃಢೀಕರಿಸಲು ಬೇರೆ ಮಾನ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಈ ನಿಯಮ ಬದಲಾವಣೆಗಳ ಮೂಲಕ ಪ್ಯಾನ್ ಕಾರ್ಡ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ನಕಲಿ ದಾಖಲೆಗಳ ಬಳಕೆಯನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. ಸಾರ್ವಜನಿಕರು ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
m

Related Posts