Featured, ಇತರೆ, ಸ್ಥಳೀಯ

ಪುತ್ತೂರು : ಕೃಷ್ಣ ಜೆ ರಾವ್ ಪ್ರಕರಣ : ಹೈಕೋರ್ಟ್‌ನಿಂದ ಮದ್ಯಂತರ ತಡೆಯಾಜ್ಞೆ – ತಾಯಿ ಹಾಗೂ ಮಗುವಿಗೆ ತಿಂಗಳಿಗೆ ₹75 ಸಾವಿರ ಜೀವನಾಂಶ ನೀಡಲು ಆದೇಶ

ಪುತ್ತೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮಗುವಿಗೆ ತಂದೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿದೆ.

ನ್ಯಾಯಾಲಯವು ಅರ್ಜಿದಾರ ಆರೋಪಿಗೆ ಷರತ್ತು ವಿಧಿಸಿ, ಸಂತ್ರಸ್ತೆ ಮತ್ತು ಮಗುವಿನ ಜೀವನೋಪಾಯಕ್ಕಾಗಿ ಪ್ರತೀ ತಿಂಗಳು ₹75,000 ಜೀವನಾಂಶ ಪಾವತಿಸಬೇಕು ಎಂದು ಆದೇಶಿಸಿದೆ. ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಈ ಹಣವನ್ನು ನಿಯಮಿತವಾಗಿ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿದಾರರು ಮುಂದಿನ ಒಂದು ವಾರದೊಳಗೆ ಮೊದಲ ಕಂತಿನ ₹75,000 ಹಣವನ್ನು ಸಂತ್ರಸ್ತೆಗೆ ಪಾವತಿಸಬೇಕಾಗಿದ್ದು, ಬಳಿಕ ಪ್ರತೀ ತಿಂಗಳು ಇದೇ ಮೊತ್ತವನ್ನು ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಈ ಷರತ್ತಿನಡಿಯಲ್ಲಿ ಪ್ರಕರಣದ ಮುಂದಿನ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ
ಇನ್ನಷ್ಟು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪೋಷಕರು ಹಾಗೂ ಸಂಬಂಧಿಕರು ಯಾವುದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಈ ಪ್ರಕರಣವು ಸಾರ್ವಜನಿಕ ಗಮನ ಸೆಳೆದಿದ್ದು, ಹೈಕೋರ್ಟ್ ಆದೇಶವು ಮಹತ್ವ ಪಡೆದುಕೊಂಡಿದೆ
m

Related Posts