Featured, ಇತರೆ, ಸ್ಥಳೀಯ

ನಿಂತಿಕಲ್ಲು : ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ನಿಂತಿಕಲ್ಲು, ಮೇ 28:
ನಿಂತಿಕಲ್ಲಿನ ಬದ್ರಿಯಾ ಜುಮಾ ಮಸೀದಿಯಲ್ಲಿ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಮಾಅತ್ ಖತೀಬ್ ಬಹು: ಜಾಫರ್ ಸಹದಿ ಪಲ್ಲತೂರು ಅವರು ಈದ್ ನಮಾಜ್‌ಗೆ ನೇತೃತ್ವ ನೀಡಿ, ಬಕ್ರೀದ್ ಹಬ್ಬದ ಸಂದೇಶ ಸಾರಿದರು. ತಮ್ಮ ಉಪನ್ಯಾಸದಲ್ಲಿ ಬಕ್ರೀದ್ ಹಬ್ಬವು ತ್ಯಾಗ, ಬಲಿದಾನ, ನಂಬಿಕೆ ಮತ್ತು ಮಾನವೀಯತೆಯ ಪ್ರತೀಕವಾಗಿದ್ದು, ಪ್ರವಾದಿ ಹಜರತ್ ಇಬ್ರಾಹಿಂ (ಅ) ಹಾಗೂ ಪ್ರವಾದಿ ಮುಹಮ್ಮದ್ (ಸ) ಅವರ ಆಶಯ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಮುಹದ್ದಿನ್ ಮುಸ್ತಾಪ ಜುಹೂರಿ, ಜಮಾಅತ್ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಮಾಅತರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಬ್ಬದ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶ ಸಾರಲಾಯಿತು.
m

Related Posts