ಸುಳ್ಯ, ಜೂನ್ 5: ಪೆರಾಜೆ ನಿವಾಸಿ, ಟ್ಯಾಂಕರ್ ಚಾಲಕ ಹಾಗೂ ಹವ್ಯಾಸಿ ಕ್ರಿಕೆಟ್ ಆಟಗಾರರಾದ ಮಹಮ್ಮದ್ ಪಿ.ಎ. ಪೆರಾಜೆ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪೆರಾಜೆ ಪರಿಸರದಲ್ಲಿ ತಮ್ಮ ಸೌಮ್ಯ ಸ್ವಭಾವ, ಸರಳ ವ್ಯಕ್ತಿತ್ವ ಹಾಗೂ ಸ್ನೇಹಪರ ನಡೆ-ನುಡಿಗಳಿಂದ ಚಿರಪರಿಚಿತರಾಗಿದ್ದ ಅವರು, ಉತ್ತಮ ಅಂಡರ್ಆರ್ಮ್ ಕ್ರಿಕೆಟ್ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ವಿಶೇಷವಾಗಿ ಅಂಡರ್ಆರ್ಮ್ ಬೌಲಿಂಗ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಹಿರಿಯ ವಯಸ್ಸಿನಲ್ಲಿಯೂ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಇದಲ್ಲದೆ, ಸ್ಥಳೀಯ ಮಸೀದಿ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಮಿಸ್ರಿಯಾ, ಮಕ್ಕಳಾದ ಫಾಯಿಝ್, ಫೈರೋಝ್ ಹಾಗೂ ಫಾಯಿಮಾ, ಸಹೋದರರಾದ ಉಮ್ಮರ್, ಆಶ್ರಫ್, ಶರೀಫ್,ಅಲ್ಲದೆ ಸಹೋದರಿಯರು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗ ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಪೆರಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.





m
