Featured, ಇತರೆ, ವಾಣಿಜ್ಯ

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಪ್ರಾಕೃತಿಕ ಅಸಮತೋಲನ  ನಿವಾರಣೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲಿ ಜಾಗೃತಿ ಮೂಡಿಸಬೇಕು : ಎ.ಸಿ.ಎಫ್ ಪ್ರಶಾಂತ್ ಪೈ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವನ ನಿರ್ಮಾಣ ಕ್ಕೆ ಚಾಲನೆ, ಉಚಿತ ಸಸಿ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಜರಗಿತು ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಹಾಗೂ ಸೂಡ ಅಧ್ಯಕ್ಷ ಕೆ. ಎಂ ಮುಸ್ತಫ ವಹಿಸಿದ್ದರು
ಸುಳ್ಯ ಉಪ ವಿಭಾಗ ದ ಸಹಾಯಕ ಅರಣ್ಯ ಸoರಕ್ಷಣಾಧಿಕಾರಿ ಪ್ರಶಾಂತ್ ಪೈ ಯವರು ಶಾಲಾ ವನಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ಪರಿಸರ ಕ್ಕೆ ಹಾನಿ ಯಾದ್ದರಿಂದ ಗ್ಲೋಬಲ್ ವಾರ್ಮಿoಗ್  ನಂತಹ ಆತಂಕ ಗಳು ನಮ್ಮ ಮುಂದೆ ಸವಾಲಾಗಿ  ನಿಂತಿದೆ, ಈ ಶಿಕ್ಷಣ  ಸಂಸ್ಥೆ ತನ್ನ ಹೆಸರಿಗೆ ಅನುಗುಣವಾಗಿ ಗ್ರೀನ್ ವ್ಯೂ ನತ್ತ ಹೆಚ್ಚಿನ ಗಮನ ಹರಿಸಿರುವುದು ಅಭಿನಂದನೀಯ ಎಂದರು
ಈ ಸಂದರ್ಭದಲ್ಲಿ ಕನ್ವಿನರ್ ಶಾಫಿ ಕುತ್ತಾಮೊಟ್ಟೆ ಉಪಸ್ಥಿತರಿದ್ದರು
ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಸ್ವಾಗತಿಸಿ, ಶಿಕ್ಷಕ ರಂಜಿತ್ ವಂದಿಸಿದರು ಹಿರಿಯ ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು

m

Related Posts