Featured, ಇತರೆ, ಸ್ಥಳೀಯ

ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಇಂದು ಪ್ರಮಾಣ ವಚನ : ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಿದ, ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರ ಮುಂದಿನ ಆಡಳಿತ ನಿರ್ವಿಘ್ನ ವಾಗಿ ನಡೆಯಲಿ ಆ ಮೂಲಕ ರಾಜ್ಯದ ಜನತೆಗೆ ಸಮೃದ್ಧಿ, ಶಾಂತಿ, ನೆಮ್ಮದಿ ಯಿಂದ ಕೂಡಿರಲಿ ಮತ್ತು ನಿರ್ಗಮಿತ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರ ಮುಂದಿನ ರಾಜಕೀಯ ಜೀವನ ಉತ್ತುಂಗಕ್ಕೆ ಏರಲಿ ಎಂಬ ಸದಾಶಯದೊಂದಿಗೆ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತು ಅಲೆಟ್ಟಿ ಗ್ರಾಮ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ  ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಬು ಗೌಡ, ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೊಲ್ಚಾರು, ಸುಳ್ಯ ತಾಲೂಕು ಪಂಚಾಯತ್ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಆನಂದ ನಾಗಪಟ್ಟಣ, ದಿನೇಶ್ ನಾಗಪಟ್ಟಣ, ರಾಧಾಕೃಷ್ಣ ಕೊಲ್ಚಾರು, ಜಯಲಕ್ಷ್ಮಿ ನಾರ್ಕೋಡು, ಮಾಲಾ ನಾಗಪಟ್ಟಣ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ಕುಡೆಕಲ್ಲು, ಕಾಂಗ್ರೆಸ್ ಕಾರ್ಯಕರ್ತರದ ಕುರುಸ್ ನಾಗಪಟ್ಟಣ, ಚಿತ್ರವೇಲು ನಾಗಪಟ್ಟಣ, ಚಂದ್ರ ಕೆ ವಿ ಕೊಲ್ಚಾರು, ಗಣೇಶ್ ನಾಗಪಟ್ಟಣ, ಎಂ ಎಸ್ ಕುಮಾರ್ ನಾಗಪಟ್ಟಣ, ರಾಜ್ ಕುಮಾರ್ ನಾಗಪಟ್ಟಣ, ರಾಮಚಂದ್ರ ಪಾವಳಿಕಜೆ, ಮತ್ತಿತರರು ಉಪಸ್ಥಿತರಿದ್ದರು.
m

Related Posts