Featured, ಅಂಕಣ, ಸ್ಥಳೀಯ

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪದಗ್ರಹಣ ಸಂಭ್ರಮ: ಸಂಪಾಜೆ ಗೇಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ಸಂಪಾಜೆ ಗೇಟ್‌ನಲ್ಲಿ ಸಂಪಾಜೆ, ಚೆಂಬು ಹಾಗೂ ಪೆರಾಜೆ ವಲಯ ಕಾಂಗ್ರೆಸ್ ಸಮಿತಿಗಳ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು. ಅಲ್ಲದೆ, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯರಾದ ಪಿ.ಎಲ್. ಸುರೇಶ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಕನ್ಯಾನ ವಿಜಯಕುಮಾರ್, ಪೆರಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಜಯರಾಮ ಪೆರುಮುಂಡ, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಕೆ.ಕೆ., ಅಕ್ರಮ-ಸಕ್ರಮ ಸಮಿತಿಯ ಸದಸ್ಯ ತುಳಸಿ ಗಾಂಧಿ ಪ್ರಸಾದ್, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿತಿನ್ ಡೆಮ್ಮಲೆ ಹಾಗೂ ಪೆರಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಂಗಜೆ ಉಪಸ್ಥಿತರಿದ್ದರು.

ಮುಖಂಡರಾದ ಮೋಹನ್ ಬಾಳಕಜೆ, ಪಾಶ್ವನಾಥ್ ಪೆರುಮುಂಡ, ವಿದ್ಯಾಸಾಗರ್, ದೇವಪ್ಪ, ವಾಸುದೇವ ಕೋಡಿ, ಗೋಪಾಲಕೃಷ್ಣ ಪುಳ್ಳಾಜೆ, ಹರಿಶ್ಚಂದ್ರ ಪಾರೆ, ದಾಮೋದರ್ ನಾಯಕ್, ರವಿಚಂದ್ರ, ಅರುಣ್ ದಾಮೋದರ್ ಎನ್.ಕೆ., ದೀಕ್ಷಿತ್ ತಿಲಕ್ಷ್, ಸುಜಿತ್, ದೇವಂಗೋಡಿ ತಿಲಕ್ ಸಂಪಾಜೆ, ಜಗನ್, ಅವಿಲಾಷ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

m

Related Posts