Featured, ಇತರೆ, ಸ್ಥಳೀಯ

ಸುಳ್ಯ : ಗಾಂಧಿನಗರದಲ್ಲಿ ವಿಶ್ವ ಪರಿಸರ ದಿನಾಚರಣೆ: ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ

ಕರ್ನಾಟಕ ಮುಸ್ಲಿಂ ಜಮಾಅತ್, SYS ಹಾಗೂ SSF, ಗಾಂಧಿನಗರ ಯುನಿಟ್‌ಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ

ಸುಳ್ಯ: “ನಾಳೆ ಅಂತ್ಯ ದಿನ ಉಂಟಾಗುತ್ತದೆ ಎಂದು ನಿನಗೆ ಖಚಿತತೆಯಿದ್ದರೂ, ಇಂದು ನಿನ್ನ ಕೈಯಲ್ಲೊಂದು ಸಸಿ ಇದ್ದರೆ ಅದನ್ನು ನೆಡಬೇಕು” ಎಂಬ ಪ್ರವಾದಿ ವಚನದಂತೆ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ಗಾಂಧಿನಗರ ಯುನಿಟ್‌ಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಂದು ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸುಳ್ಯ ಉಪವಲಯ ಅರಣ್ಯಾಧಿಕಾರಿ ಪಿ.ಡಿ ಜನಾರ್ಧನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಸುಳ್ಯ ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ ಜನತಾ,ಸುಳ್ಯ ಝೋನ್ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಶರೀಫ್ ಕಂಠಿ,ಎಸ್.ವೈ.ಎಸ್ ಸುಳ್ಯ ಝೋನ್ ಪ್ರ.ಕಾರ್ಯದರ್ಶಿ ಸಿದ್ದೀಖ್ ಬಿ.ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಅಬ್ದುಲ್ ರಹ್ಮಾನ್ ಹಾಜಿ ಪೇರೆ, ಸಿದ್ದೀಖ್ ಕಟ್ಟೆಕಾರ್,ಅಬ್ದುಲ್ ಖಾದರ್ ಸಂಗಮ್,ಅಝೀಝ್ ಕಲ್ಲುಮುಟ್ಲು,ಹನೀಫ್ ಕುರುಂಜಿ, ನೌಷಾದ್ ಕೆರೆಮೂಲೆ,ಕಬೀರ್ ಜಟ್ಟಿಪಳ್ಳ ಬಶೀರ್ ಕಲ್ಲುಮುಟ್ಲು,ಅಂಗನವಾಡಿ ಕಾರ್ಯಕರ್ತೆಯರಾದ ಸುನಿತಾ, ಸಹಾಯಕಿಯರಾದ ಪುಷ್ಪಾವತಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು‌.ಆಬಿದ್ ಕಲ್ಲುಮುಟ್ಲು ಸ್ವಾಗತಿಸಿ ವಂದಿಸಿದರು.

m

Related Posts