Featured, ಇತರೆ, ಸ್ಥಳೀಯ

SKSSF ಗೂನಡ್ಕ ಶಾಖೆ ವತಿಯಿಂದ ಸಮಸ್ತ ಸ್ಥಾಪನಾ ದಿನಾಚರಣೆ ಆಚರಣೆ

ಗೂನಡ್ಕ, ಜೂನ್ 26: SKSSF ಗೂನಡ್ಕ ಶಾಖೆ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸ್ಥಾಪನಾ ದಿನಾಚರಣೆಯನ್ನು ಗೌರವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ದುವಾದೊಂದಿಗೆ ಆರಂಭಗೊಂಡಿತು. ಬಳಿಕ ಸಮಸ್ತದ ಐತಿಹಾಸಿಕ ಪಯಣ, ಸಮಾಜ ಸೇವಾ ಕಾರ್ಯಗಳು ಹಾಗೂ ನಡೆದು ಬಂದ ಹಾದಿಯ ಕುರಿತು ಪೇರಡ್ಕ ಖತೀಬರಾದ ನಈಂ ಫೈಝಿ ಅವರು ವಿವರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ವಲಯ SKSSF ಸಂಘಟನಾ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಅವರು ಎಲ್ಲರನ್ನು ಸ್ವಾಗತಿಸಿದರು. ಪೇರಡ್ಕ ಮಸೀದಿ ಅಧ್ಯಕ್ಷರಾದ ಪಿ.ಕೆ. ಉಮ್ಮರ್, ಉಪಾಧ್ಯಕ್ಷರಾದ ಟಿ.ಬಿ. ಹನೀಫ್, ಕಾರ್ಯದರ್ಶಿ ಉಸ್ಮಾನ್, ನಿನಾನ್, ತೆಕ್ಕಿಲ್ ಮಹಮ್ಮದ್ ಕುಂಞಿ, ಹಿರಿಯರಾದ ಪಾಂಡಿ ಅಬ್ಬಾಸ್, ಮೂಲೆ ಅಮು, SKSSF ಶಾಖೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಮೊಟ್ಟೆಂಗಾರ್, ಉಪಾಧ್ಯಕ್ಷರಾದ ಸಾದುಮಾನ್ ತೆಕ್ಕಿಲ್, ಸಾಜೀದ್ ಅಝ್ಹರಿ ಸೇರಿದಂತೆ ಜಮಾಅತ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದಲ್ಲದೆ, ಎಂ.ಆರ್.ಡಿ.ಎ. ಪದಾಧಿಕಾರಿಗಳು, SKSSF ಪದಾಧಿಕಾರಿಗಳು, ಎಸ್.ಬಿ.ವಿ. ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ತ ಸ್ಥಾಪನಾ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.

m

Related Posts