ಸುಳ್ಯ, ಜು.17: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ–2026 (Special Intensive Revision–2026 – SIR) ಕಾರ್ಯ ಪ್ರಗತಿಯಲ್ಲಿದೆ.
ಜುಲೈ 17ರಂದು ಸಂಜೆ 4.00 ಗಂಟೆಯವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ Enumeration Formಗಳನ್ನು ವಿತರಿಸುವುದು ಹಾಗೂ ಅವುಗಳ Digitization ಕಾರ್ಯವನ್ನು ಕೈಗೊಂಡಿದ್ದಾರೆ.
ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದು, ಇದುವರೆಗೆ 2,08,425 Enumeration Formಗಳನ್ನು ಹಂಚಿಕೆ ಮಾಡಲಾಗಿದ್ದು, ಇದು ಶೇ.99.97 ಪ್ರಗತಿಯನ್ನು ದಾಖಲಿಸಿದೆ.
ಅದೇ ರೀತಿ, 1,15,857 Enumeration Formಗಳನ್ನು ಡಿಜಿಟೈಸೇಶನ್ ಮಾಡಲಾಗಿದ್ದು, ಇದು ಶೇ.55.57ರಷ್ಟು ಪ್ರಗತಿಯನ್ನು ಸೂಚಿಸುತ್ತದೆ.
ಇದಲ್ಲದೆ, ಪರಿಶೀಲನೆ ವೇಳೆ 855 ಮತದಾರರಿಗೆ ASDD ಗುರುತು ಮಾಡಲಾಗಿದೆ (ಶೇ.0.41). 11 ಮತದಾರರು ಗೈರು (Untraceable/Absent) ಎಂದು ಗುರುತಿಸಲ್ಪಟ್ಟಿದ್ದು (ಶೇ.0.01), 299 ಮಂದಿ ಶಾಶ್ವತವಾಗಿ ವಲಸೆ (Permanently Shifted) ಹೋಗಿರುವುದು (ಶೇ.0.14) ದಾಖಲಾಗಿದೆ.
ಇನ್ನು 461 ಮಂದಿ ಮೃತಪಟ್ಟಿರುವುದು (Death) (ಶೇ.0.22), 80 ಮಂದಿ ಈಗಾಗಲೇ ಮತ್ತೊಂದು ಸ್ಥಳದಲ್ಲಿ ನೋಂದಾಯಿಸಿರುವುದು (Already Enrolled) (ಶೇ.0.04) ಹಾಗೂ ಇತರೆ ವಿಭಾಗದಲ್ಲಿ 4 ಪ್ರಕರಣಗಳು (ಶೇ.0.00) ದಾಖಲಾಗಿವೆ.
ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿಡುವ ಉದ್ದೇಶದಿಂದ SIR-2026 ಕಾರ್ಯವನ್ನು ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮುಂದುವರಿಸುತ್ತಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಿ ಸಹಕರಿಸುವಂತೆ ಚುನಾವಣಾ ಅಧಿಕಾರಿಗಳು ಮನವಿ ಮಾಡಿದ್ದಾರೆ.




m
